ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿತ್ತು ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು!

ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯಲ್ಲಿ ಒಂದು ರೂಪಾಯಿಯ ಬರೋಬ್ಬರಿ 63 ನಾಣ್ಯಗಳು ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ.

ಹೌದು. ಇಂತಹುದೊಂದು ಘಟನೆ ರಾಜಸ್ಥಾನದ ಜೋಧ್ ‍ಪುರದಲ್ಲಿ ನಡೆದಿದೆ. 36 ವರ್ಷದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 1 ರೂಪಾಯಿಯ 63 ನಾಣ್ಯಗಳನ್ನು ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಜುಲೈ 27 ರಂದು ತೀವ್ರ ಹೊಟ್ಟೆ ನೋವು ಎಂದು ವ್ಯಕ್ತಿಯೊಬ್ಬನನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಆತನ ಸ್ಥಿತಿ ಕಂಡು ವೈದ್ಯರು ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದ್ದಾರೆ. ಸ್ಕ್ಯಾನಿಂಗ್‌ ನಲ್ಲಿ ಹೊಟ್ಟೆಯಲ್ಲಿ ಲೋಹದ ಗಡ್ಡೆಯಂತಹ ವಸ್ತು ಪತ್ತೆಯಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರು ‘ಎಂಡೋಸ್ಕೋಪಿಕ್ ಕಾರ್ಯವಿಧಾನ ‘ ದ ಸಹಾಯದಿಂದ 2 ದಿನಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯಗಳನ್ನು ಹೊರತೆಗೆದಿದ್ದಾರೆ.

“ಹೊಟ್ಟೆ ನೋವಿನಿಂದ ವ್ಯಕ್ತಿಯೊಬ್ಬ ನಮ್ಮ ಆಸ್ಪತ್ರೆಗೆ ಬಂದಿದ್ದು, ಅವನ ಎಕ್ಸ್ – ರೇ ಮಾಡಿಸಿದಾಗ ಅವನು ನಾಣ್ಯಗಳನ್ನು ನುಗ್ಗಿರುವುದು ಪತ್ತೆಯಾಗಿದೆ . ಈ ಕುರಿತು ವಿಚಾರಿಸಿದಾಗ ಆತ 10-15 ನಾಣ್ಯಗಳನ್ನು ನುಂಗಿರುವುದನ್ನು ಒಪ್ಪಿಕೊಂಡಿದ್ದು, ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ. ಈತ ಆತ ಚೇತರಿಸಿಕೊಂಡಿದ್ದಾನೆ” ಎಂದು ವೈದ್ಯ ನರೇಂದ್ರ ಭಾರ್ಗವ್ ತಿಳಿಸಿದರು.

error: Content is protected !!
Scroll to Top
%d bloggers like this: