ಮುಂದಿನ ಲೋಕಸಭಾ ಚುನಾವಣೆ : ಪ್ರಧಾನಿ ಅಭ್ಯರ್ಥಿ ಘೋಷಿಸಿದ ಅಮಿತ್ ಶಾ
ಪಾಟ್ನಾ : ಲೋಕಸಭಾ ಚುನಾವಣೆಗೆ ಹೆಚ್ಚು ಕಡಿಮೆ 2 ವರ್ಷ ಬಾಕಿ ಇರುವಾಗಲೇ ಭಾರತೀಯ ಜನತಾ ಪಾರ್ಟಿ ತನ್ನ ಮುಂದಿನ ಪ್ರಧಾನಿ ಅಭ್ಯರ್ಥಿ ಘೋಷಿಸಿದೆ. ಪಾಟ್ನಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಘೋಷಣೆ ಮಾಡಿದ್ದಾರೆ.
ಇವತ್ತಿಗೆ ಇದು ದೊಡ್ಡ ಸುದ್ದಿ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಅಳುತ್ತಿರುವ ಬಿಜೆಪಿಯ ಮುಂದಿನ ಪ್ರಧಾನಮಂತ್ರಿ ಯಾರು ಎನ್ನುವುದನ್ನು ತಿಳಿದುಕೊಳ್ಳಲು ಇಡೀ ವಿಶ್ವವೇ ಕಾದಿತ್ತು. ನರೇಂದ್ರ ಮೋದಿ ಅವರ ನಂತರ ಪ್ರಧಾನಮಂತ್ರಿಯ ಅಭ್ಯರ್ಥಿ ಯಾರು ಎನ್ನುವುದು ಈಗ ಬಹಿರಂಗವಾಗಿದೆ.
ನರೇಂದ್ರ ಮೋದಿ ಅವರು ಈ ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತಾರೆನ್ನುವ ವದಂತಿಗಳಿಗೆ ತೆರೆ ಎಳೆದಿರುವ ಅಮಿತ್ ಶಾ, ಮೋದಿಯೇ ಮುಂದಿನ ಅವಧಿಗೂ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ. ಕಟ್ಟಿ ಹಾಕಲಾಗದಂತಹ ಆಶ್ವಮೇಧದ ಕುದುರೆಯನ್ನು ಓಡಿಸುತ್ತಿರುವ ನರೇಂದ್ರ ಮೋದಿಯ ನಾಗಾಲೋಟಕ್ಕೆ ಕಡಿವಾಣ ಹಾಕಬಲ್ಲ ಅಭ್ಯರ್ಥಿಗಾಗಿ ವಿರೋಧ ಪಕ್ಷಗಳು ಇನ್ನು ಹುಡುಕಾಟ ನಡೆಸಬೇಕಿದೆ.
ಪಾಟ್ನಾದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ವಿವಿಧ ಮೋರ್ಚಾಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಜೆಡಿಯು ಮೈತ್ರಿಯು 2024ರ ಲೋಕಸಭಾ ಚುನಾವಣೆಯಲ್ಲಿಯೂ ಮುಂದುವರಿಯುತ್ತದೆ. ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿರುತ್ತಾರೆ ಎಂದು ಅಮಿತ್ ಶಾ ಹೇಳಿದರು.