ದೇಶದಾದ್ಯಂತ ಭಾರೀ ಸುದ್ದಿ ಮಾಡಿದ ಈ ಅರ್ಪಿತಾ ಮುಖರ್ಜಿ ಯಾರು ಗೊತ್ತೇ? ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾರೀ ಸೌಂಡ್ ಮಾಡಿದ ಈಕೆಯ ಹಿನ್ನಲೆ…ಇಲ್ಲಿದೆ!!!!

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಮೂಲಕ ಈವರೆಗೆ 750 ಕೋಟಿಗೂ ಹೆಚ್ಚು ಹಣ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಶಿಕ್ಷಕರ ನೇಮಕಾತಿ ಹಗರಣದ ಜೊತೆ ಜೊತೆಗೆ ದೇಶದಾದ್ಯಂತ ಒಂದು ಹೆಸರು ಭಾರೀ ಸೌಂಡ್ ಮಾಡ್ತಿದೆ. ಅದುವೇ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ. ಅಷ್ಟಕ್ಕೂ ಈಕೆ ಯಾರು? ಎಲ್ಲಿಯವಳು? ಹಿನ್ನೆಲೆ ಏನು? ಬನ್ನಿ ತಿಳಿಯೋಣ.


Ad Widget

Ad Widget

Ad Widget

Ad Widget

Ad Widget

Ad Widget

ಜುಲೈ 23 ರಂದು ಅರ್ಪಿತಾ ಮತ್ತು ಪಾರ್ಥ ಚಟರ್ಜಿ ಮನೆಗೆ ಇಡಿ ದಾಳಿ ನಡೆಸಿದಾಗ ಹಣದ ರಾಶಿ ಕಂಡಾಗ ನಿಜಕ್ಕೂ ಇಡೀ ದೇಶವೇ ತಲ್ಲಣಗೊಂಡಿತ್ತು. ಇದುವರೆಗೆ ಅರ್ಪಿತಾ ಅವರ ಬಳಿ ಸರಿ ಸುಮಾರು ರೂ. 50 ಕೋಟಿಯಷ್ಟು ಹಣವನ್ನು ವಶಕ್ಕೆ ಪಡೆಯಲಾಗಿದೆ. ಹಣದ ರಾಶಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿವೆ.

ಅರ್ಪಿತಾ ಮುಖರ್ಜಿ ಮೂಲತಃ ಓರ್ವ ಮಾಡೆಲ್ ಆಗಿ ಕೆಲಸ ಪ್ರಾರಂಭಿಸಿದ್ದು, ನಂತರ ಬೆಂಗಾಳಿ, ಒಡಿಯಾ, ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ‌. 2008ರಿಂದ 2014 ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅರ್ಪಿತಾ, ಬಂಗಾಳಿ ಚಿತ್ರರಂಗದ ಸೂಪರ್‌ಸ್ಟಾರ್ ನಟರಾದ ಪ್ರೊಸೆನ್‌ಜಿತ್ ಸೇರಿದಂತೆ ಹಲವರ ಜತೆ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಅರ್ಪಿತಾ ಮುಖರ್ಜಿ ನಟಿಸಿರುವ ಹಲವು ಬೆಂಗಾಲಿ ಚಿತ್ರಗಳು ಸೂಪರ್ ಹಿಟ್ ಆಗಿದ್ದು, ಇವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.

ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅರ್ಪಿತಾ ತಂದೆ ತೀರಿಕೊಂಡ ಬಳಿಕ ಜಾರ್‌ಗ್ರಾಮ್‌ನ ಉದ್ಯಮಿಯೊಬ್ಬರನ್ನು ಜೊತೆ ವಿವಾಹವಾಗಿದ್ದರು. ನಂತರ ವಿಚ್ಛೇದನ ಪಡೆದ ಅರ್ಪಿತಾ ನಟನೆಯತ್ತ ಮುಖ ಮಾಡಿದ್ದರು.

2016ರ ಸಮಯದಲ್ಲಿ ಅರ್ಪಿತಾಗೆ ಬಂಗಾಳಿ ನಟರೊಬ್ಬರು ಪಾರ್ಥ ಚಟರ್ಜಿ ಅವರನ್ನು ಪರಿಚಯಿಸಿದ್ದರು. 2021ರ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಚಟರ್ಜಿ ಪರ ಅರ್ಪಿತಾ ಪ್ರಚಾರ ನಡೆಸಿದ್ದರು ಕೂಡಾ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಾರ್ಥ ಚಟರ್ಜಿ ಭಾಗವಹಿಸುತ್ತಿದ್ದ ಹಲವು ರಾಜಕೀಯ ಕಾರ್ಯಕ್ರಮಗಳಲ್ಲಿ ಅರ್ಪಿತಾ ಸಕ್ರಿಯವಾಗಿದ್ದರು.

ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ ಈ ನಟಿ ನಂತರ ರಾಜಕೀಯದತ್ತ ವಾಲಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರೂ ಸಹ ಅರ್ಪಿತಾ ಐಷರಾಮಿ ಫ್ಲ್ಯಾಟ್ ಹೊಂದಿದ್ದು ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದರು. ವಿದೇಶಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೂ ಅರ್ಪಿತಾ ಮುಖರ್ಜಿ ಭಾಗವಹಿಸುತ್ತಿದ್ದರು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದ ಅರ್ಪಿತಾ ಇನ್‌ಸ್ಟಾಗ್ರಾಮ್‌ನಲ್ಲಿ 32 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಸದ್ಯ ಬಂಧನಕ್ಕೊಳಗಾಗಿರುವ ಅರ್ಪಿತಾ ಅವರು ಟಿಎಂಸಿ ನಾಯಕರೊಂದಿಗೆ ಕಾಣಿಸಿಕೊಂಡಿರುವ ಹಲವು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದೇ ವಿಚಾರ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ ಎಂದರೆ ತಪ್ಪಲ್ಲ.

error: Content is protected !!
Scroll to Top
%d bloggers like this: