ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಯುವತಿ | ಕೋಪಗೊಂಡ ಯುವತಿಯ ತಂದೆ ಮಾಡಿದ್ದು!?

ತಂದೆಯ ಇಚ್ಛೆಗೆ ವಿರುದ್ಧವಾಗಿ ಹಿಂದೂ ಯುವಕನನ್ನು ಪ್ರೀತಿಸಿ ಓಡಿಹೋಗಿ ಮದುವೆಮಾಡಿಕೊಂಡ ಕೋಪದಿಂದ ಮಗಳ ಮೇಲೆಯೇ ಆಟೋ ಹತ್ತಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಇಲ್ಲಿನ ಮಾಲಿ ಮೊಹಲ್ಲಾ ನಮಕ್ ಕತ್ರ ನಿವಾಸಿಗಳಾದ ನರೇಂದ್ರ ಕುಮಾರ್ ಸೈನಿ ಮತ್ತು ನಗ್ಮಾ ಖಾನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಎರಡೂ ಮನೆಯವರ ವಿರೋಧವಿತ್ತು. ಆದರೆ ಪ್ರೀತಿ ಉಳಿಸಿಕೊಳ್ಳುವ ಉದ್ದೇಶದಿಂದ ಪ್ರೇಮಿಗಳು ಫೆಬ್ರವರಿ ತಿಂಗಳಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

ಬಳಿಕ ದೆಹಲಿಗೆ ತೆರಳಿ, ಆರ್ಯ ಸಮಾಜ ಮಂದಿರದಲ್ಲಿ ಮದುವೆಯಾಗಿದ್ದಾರೆ. ಮದುವೆಯ ನಂತರ ಇಬ್ಬರೂ ಭರತ್‌ಪುರಕ್ಕೆ ವಾಪಸ್​ ಆಗಿದ್ದರು. ಇದರ ಮಧ್ಯೆ ನಗ್ಮಾಳ ತಂದೆ ಇಸ್ಲಾಂ ಖಾನ್ ನನ್ನ ಮಗಳನ್ನ ಅಪಹರಿಸಿ ಆಮಿಷವೊಡ್ಡಿ ಬಲವಂತವಾಗಿ ಮದುವೆ ಮಾಡಿಕೊಂಡಿರುವುದಾಗಿ ಹೇಳಿ ಹುಡುಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಮಾಹಿತಿ ತಿಳಿದ ಜೋಡಿ, ಪೊಲೀಸ್ ಪ್ರಕರಣ ಹಾಗೂ ಕುಟುಂಬ ಸದಸ್ಯರ ಬೆದರಿಕೆಯಿಂದ ಹುಡುಗ ತನ್ನ ಅಣ್ಣನೊಂದಿಗೆ ಹೆಂಡತಿ ಜೊತೆ ಮಧ್ಯಪ್ರದೇಶದ ಕಟ್ನಿಗೆ ತೆರಳಿದ್ದರು. ಬಳಿಕ ಎರಡು ತಿಂಗಳ ಕಾಲ ಮಥುರಾದಲ್ಲಿ ಉಳಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಗ್ಮಾ ಗರ್ಭಿಣಿಯಾಗಿದ್ದಾರೆ. ಇದಾದ ಬಳಿಕ ಇಬ್ಬರು ನಗರದ ರಂಜಿತ್ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡಲು ಶುರು ಮಾಡಿದ್ದಾರೆ.

ನಗ್ಮಾ ಗರ್ಭಿಣಿ ಆದ್ದರಿಂದ, ನಿನ್ನೆ ಮಧ್ಯಾಹ್ನ ಪತಿ ಜೊತೆ ಆಸ್ಪತ್ರೆಗೆ ತಪಾಸಣೆಗೋಸ್ಕರ ತೆರಳಿದ್ದರು. ಈ ವೇಳೆ ಇಸ್ಲಾಂ ಆಟೋದಲ್ಲಿ ತನ್ನ ಮಗಳನ್ನ ಹಿಂಬಾಲಿಸಿದ್ದಾನೆ. ಗಂಡನೊಂದಿಗೆ ನಗ್ಮಾ ಜ್ಯೂಸ್ ಕುಡಿದು ಬೈಕ್ ಮೇಲೆ ತೆರಳುತ್ತಿದ್ದಾಗ ಆಟೋ ಡಿಕ್ಕಿ ಹೊಡೆಸಿದ್ದಾನೆ.

ಆದರೆ, ಪ್ರಾಣಾಪಾಯದಿಂದ ಇಬ್ಬರು ಪಾರಾಗಿದ್ದಾರೆ. ಘಟನೆ ಬೆನ್ನಲ್ಲೇ ಆಟೋ ಸಮೇತವಾಗಿ ಇಸ್ಲಾಂ ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಸಂತ್ರಸ್ತರನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಿದ್ದಾರೆ. ಮುಸ್ಲಿಂ ಹುಡುಗಿ ಹಿಂದೂ ಯುವಕನನ್ನು ಮದುವೆ ಆದಳು ಎಂಬ ದ್ವೇಷಕ್ಕೆ ತಂದೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

error: Content is protected !!
Scroll to Top
%d bloggers like this: