ಕರೆಂಟ್ ಬಿಲ್ ನೋಡಿದ ಶಾಕ್ ನಿಂದ ಹಾಸಿಗೆ ಹಿಡಿದ ಮನೆ ಯಜಮಾನ!?

ವಿದ್ಯುತ್ ಬಿಲ್ ಸರಬರಾಜು ಕಂಪನಿಯ ಎಡವಟ್ಟುಗಳು ಸಾಲು ಸಾಲಾಗಿ ಬೆಳಕಿಗೆ ಬರುತ್ತಿದೆ. ಇವರ ತಪ್ಪಿನಿಂದ ಅಮಾಯಕ ವ್ಯಕ್ತಿಗಳು ವ್ಯಥೆ ಪಡುವ ರೀತಿಯಾಗಿದೆ. ಈ ಹಿಂದೆ ದೊಡ್ಡ ಮೊತ್ತದ ಬಿಲ್ ನೋಡಿದ ವ್ಯಕ್ತಿ ವಿದ್ಯುತ್ ಕಂಬವನ್ನೇ ಏರಿ ಕುಳಿತ ದೃಶ್ಯ ವೈರಲ್ ಆಗಿತ್ತು. ಇದೀಗ ಇಲ್ಲೊಂದು ಕುಟುಂಬ ಕರೆಂಟ್ ಬಿಲ್ ನೋಡಿದ ಶಾಕ್ ನಿಂದಾಗಿ ಹಾಸಿಗೆ ಹಿಡಿಯುವಂತೆ ಮಾಡಿದೆ.

ಹೌದು. ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಪ್ರಿಯಾಂಕಾ ಗುಪ್ತಾ ಅವರು 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಆಕೆಯ ಮಾವ ಕೂಡ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆಪರೇಟರ್ ಮಾಡಿದ ದೋಷದಿಂದ ಹೀಗಾಗಿದೆ ಎಂದು ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ವಿದ್ಯುತ್ ಕಂಪನಿ ಹೇಳಿದೆ. ನಂತರ 1,300 ರೂಪಾಯಿಗಳ ಸರಿಪಡಿಸಿದ ಬಿಲ್ ನೀಡಿದೆ.

ಗುಪ್ತಾ ಅವರ ಪತಿ ಸಂಜೀವ್ ಕಂಕಣೆ, ಮನೆಯ ಜುಲೈ ತಿಂಗಳ ವಿದ್ಯುತ್ ಬಿಲ್‌ ನಲ್ಲಿನ ಮೊತ್ತ ನೋಡಿದ ನಂತರ ತಂದೆ ಅನಾರೋಗ್ಯಕ್ಕೆ ಒಳಗಾದರು ಎಂದು ಹೇಳಿದ್ದಾರೆ.

ಜುಲೈ 20 ರಂದು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ಮಿತ್ರನ್ ಕಂಪನಿ, ಪೋರ್ಟಲ್ ಮೂಲಕ ಬಿಲ್ ಪರಿಶೀಲನೆ ನಡೆಸಿದ್ದು, ಅದು ಸರಿಯಾಗಿದೆ ಎಂದು ಅವರು ಹೇಳಿದ್ದಾರೆ. ನಂತರ ರಾಜ್ಯ ವಿದ್ಯುತ್ ಕಂಪನಿಯಿಂದ ಬಿಲ್ ಸರಿಪಡಿಸಲಾಗಿದೆ ಎಂದು ಕಂಕಣೆ ತಿಳಿಸಿದ್ದಾರೆ.

ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಅವರು ಮಾತನಾಡಿ, “ಭಾರಿ ವಿದ್ಯುತ್ ಬಿಲ್ ಬರಲು ಕಾರಣವಾದ ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕ ಸಂಖ್ಯೆ ನಮೂದಿಸುವಲ್ಲಿ ಎಡವಟ್ಟು ಮಾಡಿದ ಕಾರಣ ಹೆಚ್ಚಿನ ಮೊತ್ತದೊಂದಿಗೆ ಬಿಲ್‌ ಬಂದಿದೆ. ವಿದ್ಯುತ್ ಗ್ರಾಹಕರಿಗೆ 1,300 ರೂ.ಗಳ ತಿದ್ದುಪಡಿ ಬಿಲ್ ನೀಡಲಾಗಿದೆ” ಎಂದಿದ್ದಾರೆ.

error: Content is protected !!
Scroll to Top
%d bloggers like this: