ದಕ್ಷಿಣ ಕನ್ನಡ ಉದ್ವಿಗ್ನ | ಬಿಜೆಪಿ ಕಾರ್ಯಕರ್ತನ ಸಾವಿಗೆ ಹರಿದು ಬಂದ ಜನಸಾಗರ| ಸಚಿವ, ಶಾಸಕರಿಗೆ ತಡೆ, ನಳೀನ್ ಕುಮಾರ್ ಕಟೀಲು ಕಾರು ಪಂಕ್ಚರ್ !!!

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಿನ್ನೆ ದಾರುಣವಾಗಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರ ಅವರ ಬೆಳ್ಳಾರೆ ತಲುಪಿದೆ. ಬೆಳಗ್ಗಿನಿಂದ ಹಿಂದೂ ಕಾರ್ಯಕರ್ತರು ಯಾವುದೇ ಜನ ಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಬರದೇ ಇದ್ದುದ್ದರಿಂದ ವಿಪರೀತ ಆಕ್ರೋಶಕ್ಕೊಳಗಾಗಿದ್ದರು. ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಬಿಜೆಪಿಗೆ ಹಾಗೂ ಬಿಜೆಪಿ ನಾಯಕರಿಗೆ ದಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ಅವರು ಪ್ರವಿಣ್ ಅವರ ಅಂತಿಮ ದರ್ಶನಕ್ಕೆಂದು ಬಂದಾಗ, ಹಿಂದೂ ಕಾರ್ಯಕರ್ತರು ಅವರ ಕಾರಿಗೆ ತಡೆ ಒಡ್ಡಿದ್ದು ಸ್ವಲ್ಪ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಅಷ್ಟು ಮಾತ್ರವಲ್ಲದೇ ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹಾಗೂ ಸಚಿವ ಎಸ್.ಅಂಗಾರರಿಗೂ ಕಾರ್ಯಕರ್ತರು ತಡೆಯೊಡ್ಡಿದ್ದು, ಸಚಿವರಿಬ್ಬರು ಕಾರ್ಯಕರ್ತರ ಧಿಕ್ಕಾರದ ಘೋಷಣೆ ಕೂಗಿದ್ದು ಸಚಿವರಿಬ್ಬರು ಪೆಚ್ಚುಮೋರೆ ಹಾಕಿ ಕುಳಿತುಕೊಳ್ಳಬೇಕಾಯಿತು.

ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಕಾರನ್ನು ಅಡ್ಡಗಟ್ಟಿ, ಪಂಕ್ಚರ್ ಮಾಡಿದ್ದಾರೆ. ಬಳಿಕ ಬೇರೆ ಕಾರಿನಲ್ಲಿ ನಳೀನ್ ತೆರಳಿದ್ದಾರೆ. ಪರಿಸ್ಥಿತಿ ಹತೋಟಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧಿಸಿ ಅಂತಿಮ ದರ್ಶನದ ಸ್ಥಳಕ್ಕೆ ಸಚಿವ ನಳೀನ್‌ ಕುಮಾರ್‌ ಕಟೀಲ್‌, ಸಚಿವ ಸುರೇಶ್‌ ಸೇರಿದಂತೆ ಆಗಮಿಸುತ್ತಿದ್ದಂತೆ ಬೆಳ್ಳಾರೆಯಲ್ಲಿ ಭುಗಿಲೆದ್ದ ಆಕ್ರೋಶದ ಕಿಚ್ಚು ಹೆಚ್ಚಾಗಿದೆ.
ಜಮಾಯಿಸಿದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರ ಲಾಠಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ಮಸೀದಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಮಸೀದಿ ಬಳಿಯಿಂದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆ ವೇಳೆ ಬಿಜೆಪಿ ಕಾರ್ಯಕರ್ತನ ತಲೆಗೆ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!
Scroll to Top
%d bloggers like this: