ಪ್ರವೀಣ್ ನೆಟ್ಟಾರು ಹತ್ಯೆ | ಎಡಿಜಿಪಿ ಅಲೋಕ್ ಕುಮಾರ್ ಸುಳ್ಯದಲ್ಲಿ ಮೊಕ್ಕಾಂ

Share the Article

ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಛಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸುಳ್ಯದಲ್ಲಿ ಎರಡು ದಿನ ಮೊಕ್ಕಾಂ ಹೂಡಲಿದ್ದಾರೆ.

ಖಡಕ್ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಈಗಾಗಲೇ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಮತ್ತು ದಕ್ಷಿಣ ಕನ್ನಡ ಎಸ್.ಪಿ. ಹೃಷಿಕೇಶ್ ಸೋನಾವಣೆಯವರಿಂದ ಮಾಹಿತಿ ಪಡೆದಿದ್ದಾರೆ.

ಅಹಿತಕರ ಘಟನೆ ನಡೆದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಲಿದ್ದು ನಂತರ ಸುಳ್ಯಕ್ಕೆ ಭೇಟಿ ನೀಡಲಿದ್ದಾರೆ

Leave A Reply