ಪಂಚಭೂತಗಳಲ್ಲಿ ಲೀನವಾದ ಪ್ರವೀಣ್ ನೆಟ್ಟಾರು | ಮಣ್ಣಲ್ಲಿ‌ ಮಣ್ಣಾದ ಸಂಘದ ಸ್ವಯಂ ಸೇವಕ

ಪುತ್ತೂರು: ಕುಟುಂಬಸ್ಥರ ಆಕ್ರಂದನದ ನಡುವೆಯೇ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬುಧವಾರ ಸಂಜೆ ಸ್ವಗ್ರಾಮದಲ್ಲಿ ಪಂಚಭೂತಗಳಲ್ಲಿ ಲೀನವಾದರು.

ಬೆಳ್ಳಾರೆ ಗ್ರಾಮದಲ್ಲಿ ಸಾವಿರಾರು ಹಿಂದೂ ಕಾರ್ಯಕತರು, ಸಾರ್ವಜನಕರು ಮತ್ತು ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಪ್ರವೀಣ್ ನೆಟ್ಟಾರು ಸಾವಿಗೆ ನ್ಯಾಯ ಬೇಕು ಎಂದು ಸಾವಿರಾರು ಜನರು ಆಕ್ರೋಶ ಹೊರಹಾಕಿದ್ದಾರೆ. ಅಂತಿಮ ದರ್ಶನ ಪಡೆಯಲು ಆಗಮಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ರನ್ನು ಮುತ್ತಿಗೆ ಹಾಕಿ, ಸಚಿವರಾದ ಸುನೀಲ್ ಕುಮಾರ್, ಅಂಗಾರ ಅವರ ಕಾರನ್ನೂ ಅಡ್ಡಗಟ್ಟಿ ಹಿಂದೂ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆ ವೇಳೆ ನಾನೇನ್ನುಕ್ ಬೇಕು, ಗೆದ್ದ ಮೇಲೆ ನಾವು ಬೇಡವೇ? ಪಕ್ಷದ ಕಾರ್ಯಕರ್ತರಿಗೇ ರಕ್ಷಣೆ ಇಲ್ಲ ಅಂದ್ರೆ ಹೇಗೆ? ಎಂದು ಸಿಟ್ಟಿಗೆದ್ದು ಧಿಕ್ಕಾರ ಕೂಗಿದ್ದರು. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಇನ್ನು ಬಿಜೆಪಿ ಯುವ ಮುಖಂಡನ ಹತ್ಯೆ ಖಂಡಿಸಿ ಹಾಗೂ ಅವರ ಸಾವಿಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿ ಹಲವೆಡೆ ಬಿಜೆಪಿ ಪಕ್ಷದ ಪದಾಧಿಕಾರಿಗಳು ರಾಜೀನಾಮೆ ಘೋಷಿಸಿದ್ದಾರೆ. ಆ ಮೂಲಕ ದುಷ್ಕರ್ಮಿಗಳ ಮಟ್ಟ ಹಾಕಲು ಸರ್ಕಾರವನ್ನ ಆಗ್ರಹಿಸುತ್ತಿದ್ದಾರೆ.

ಇನ್ನು ಬಿಜೆಪಿ ಯುವ ಮುಖಂಡನ ಹತ್ಯೆ ಖಂಡಿಸಿ ಹಾಗೂ ಅವರ ಸಾವಿಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿ ಹಲವೆಡೆ ಬಿಜೆಪಿ ಪಕ್ಷದ ಪದಾಧಿಕಾರಿಗಳು ರಾಜೀನಾಮೆ ಘೋಷಿಸಿದ್ದಾರೆ. ಆ ಮೂಲಕ ದುಷ್ಕರ್ಮಿಗಳ ಮಟ್ಟ ಹಾಕಲು ಸರ್ಕಾರವನ್ನ ಆಗ್ರಹಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಹಿಂದುಗಳ ಹತ್ಯೆ ನಡೆಯುತ್ತಿದೆ ಅಂದರೆ ಏನರ್ಥ ಎಂದು ಪ್ರಶ್ನಿಸುತ್ತಿದ್ದಾರೆ.

Leave A Reply

Your email address will not be published.