“ದಿಂಬಿನೊಂದಿಗೆ ಸೆಕ್ಸ್ ” ಮಾಡಲು ವಿದ್ಯಾರ್ಥಿಗಳಿಂದ ರ‌್ಯಾಗಿಂಗ್ | ಭಯಾನಕ ರ್ಯಾಗಿಂಗ್ ಕಥೆಯ ಬಿಚ್ಚಿಟ್ಟ ಯುವಕ

ಕಾಲೇಜುಗಳಲ್ಲಿ ರ್ಯಾಗಿಂಗ್ ಸಾಮಾನ್ಯವಾಗಿ ಬಿಟ್ಟಿದೆ. ಈ ಬಗ್ಗೆ ಎಷ್ಟೇ ತಿಳುವಳಿಕೆ ಆಗಲಿ ಅಥವಾ ಎಚ್ಚರಿಕೆ ಆಗಲಿ ನೀಡದರೂ ವಿದ್ಯಾರ್ಥಿಗಳ ರ್ಯಾಂಗಿಂಗ್ ಹಾವಳಿ ತಪ್ಪಲ್ಲ. ಇದಕ್ಕೆ ನಿದರ್ಶನವೆಂಬಂತೆ, ಮಧ್ಯಪ್ರದೇಶದ ಸರ್ಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ತಲೆತಗ್ಗಿಸುವಂತ ಘಟನೆಯೊಂದು ನಡೆದಿದೆ.

ಇಂದೋರ್‌ನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಹಿರಿಯ ವೈದ್ಯಕೀಯ ಪದವಿ ಮತ್ತು ಬ್ಯಾಚುಲರ್ ಆಫ್ ಸರ್ಜರಿ ವಿದ್ಯಾರ್ಥಿಗಳು ಕೆಲವು ಕಿರಿಯ ವೈದ್ಯಕೀಯ ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೌದು, ಹಿರಿಯ MBBS ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳಿಗೆಗೆ ‘ದಿಂಬಿನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಮತ್ತು ತಮ್ಮ ಮಹಿಳಾ ಬ್ಯಾಚ್‌ಮೇಟ್‌ಗನ್ನು ನಿಂದಿಸುವಂತೆ ಒತ್ತಾಯ ಮಾಡಿದ ಆರೋಪವೊಂದು ಬೆಳಕಿಗೆ ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಜೂನಿಯರ್ ವಿದ್ಯಾರ್ಥಿಯೊಬ್ಬ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಆ್ಯಂಟಿ ರ‌್ಯಾ ಗಿಂಗ್ ಸಹಾಯವಾಣಿಗೆ ಕರೆ ಮಾಡಿ ಸಹಾಯ ಕೇಳಿದ್ದಾನೆ. ‘ಹಿರಿಯ ವಿದ್ಯಾರ್ಥಿಗಳು ದಿಂಬು ಸೆಕ್ಸ್ ಮಾಡುವಂತೆ ಮತ್ತು ಬ್ಯಾಚ್‌ಮೇಟ್‌ಗಳ ವಿರುದ್ಧ ಅಸಹ್ಯಕಾರ ಟೀಕೆ ಮಾಡಲು ಹಾಗೂ ಬಲವಂತವಾಗಿ ಪರಸ್ಪರ ಕಪಾಳಮೋಕ್ಷ ಮಾಡಿಸುವಂತೆ ಹೇಳಿದ್ದಾರೆ’ ಎಂದು ಕಿರಿಯ ವಿದ್ಯಾರ್ಥಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಇದೀಗ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆ ಪ್ರಭಾರಿ ತೆಹಜೀಬ್ ಖಾಜಿ ಹೇಳಿದ್ದಾರೆ.

error: Content is protected !!
Scroll to Top
%d bloggers like this: