ಕೊನೆಯ ಬಾರಿ “ಸೆಕ್ಸ್” ಮಾಡಿದ್ದು ಯಾವಾಗ ಎಂದು ವಿಜಯ್ ದೇವರಕೊಂಡಗೆ ಕೇಳಿದ ಪ್ರಶ್ನೆಗೆ ಅನನ್ಯಾ ಕೊಟ್ಟ ಉತ್ತರ ಈ ರೀತಿ ಇದೆ |

ಕರಣ್ ಜೊಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋದಲ್ಲಿ ವೈಯಕ್ತಿಕ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳುವುದನ್ನು ಎಲ್ಲರೂ ನೋಡಿರಬಹುದು. ಅದು ಮುಜುಗುರ ಪಡುವಂತದ್ದೇ ಆಗಿರಬಹುದು ಅಥವಾ, ತೀರ ತೀರ ಪರ್ಸನಲ್ ಪ್ರಶ್ನೆಗಳನ್ನು ಕೇಳುವುದೇ ಆಗಿರಬಹುದು. ಕೆಲವು ಸೆಲೆಬ್ರಿಟಿ ಗೆಸ್ಟ್ ಗಳು ಇದನ್ನು ಸೀರಿಯಸ್ ಆಗಿ ತಗೋಳೋದಿಲ್ಲ.

ಕೆಲವರ ನಸೀಬ್ ಹೇಗಿರುತ್ತೆ ಅಂದರೆ ಅವರು ಬಹಳ ಕಡಿಮೆ ಅವಧಿಯಲ್ಲಿ ಸ್ಟಾರ್ ಗಿರಿ ಪಡೆಯುತ್ತಾರೆ. ಅಂತಹ ಕೆಲವೇ ಕೆಲವು ನಟರಲ್ಲಿ ವಿಜಯ್ ದೇವರಕೊಂಡ ಕೂಡಾ ಒಬ್ಬರು.


Ad Widget

Ad Widget

Ad Widget

Ad Widget

Ad Widget

Ad Widget

ವಿಜಯ್ ದೇವರಕೊಂಡ ಬಹಳ ದೊಡ್ಡ ಹೆಸರು ತಂದು ಕೊಟ್ಟ ಚಿತ್ರವೇ ‘ಅರ್ಜುನ್ ರೆಡ್ಡಿ’ ಸಿನಿಮಾ. ಅನಂತರ ಇವರು ಮುಟ್ಟಿದ್ದೆಲ್ಲ ಚಿನ್ನ. ತೆಲುಗು ಚಿತ್ರರಂಗದ ಬಳಿಕ ಇದೀಗ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ ವಿಜಯ್ ದೇವರಕೊಂಡ.

‘ಕಾಫಿ ವಿತ್ ಕರಣ್ ಸೀಸನ್ 7’ ಗೆ ಈ ಬಾರಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅತಿಥಿ ಆಗಿ ಬಂದಿದ್ದಾರೆ. ಈ ವೇಳೆ ವಿಜಯ್ ದೇವರಕೊಂಡಗೆ ನೇರ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಶೋ ನಲ್ಲಿ ಈಗಾಗಲೇ ಮೂರು ಎಪಿಸೋಡ್‌ಗಳು ಪ್ರಸಾರ ಆಗಿದೆ. ಮೊದಲ ಎಪಿಸೋಡ್‌ನಲ್ಲಿ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಆಗಮಿಸಿದ್ದರು. ನಂತರ ಜಾನ್ವಿ ಕಪೂರ್ ಹಾಗೂ ಸಾರಾ ಅಲಿ ಖಾನ್ ಬಂದಿದ್ದರು. ಕಳೆದ ವಾರ ಅಕ್ಷಯ್ ಕುಮಾರ್ ಹಾಗೂ ಸಮಂತಾ ಒಟ್ಟಾಗಿ ಈ ಶೋಗೆ ಆಗಮಿಸಿದ್ದರು. ಈ ಬಾರಿ ‘ಲೈಗರ್’ ಜೋಡಿ ಬರುತ್ತಿದೆ.

ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಕರಣ್ ಕೂಡ ಬಂಡವಾಳ ಹೂಡಿದ್ದಾರೆ. ಪ್ರಚಾರದ ಉದ್ದೇಶದಕ್ಕಾಗಿ ವಿಜಯ್ ಹಾಗೂ ಅನನ್ಯಾ ‘ಕಾಫಿ ವಿತ್ ಕರಣ್ ಸೀಸನ್ 7’ಗೆ ಜೊತೆಯಾಗಿಯೇ ಬಂದಿದ್ದಾರೆ.

ಈ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಅವರಿಗೆ ಕರಣ್ ನೇರ ಪ್ರಶ್ನೆಯೊಂದನ್ನು ಕೇಳುತ್ತಾರೆ.
‘ನೀವು ಕೊನೆಯದಾಗಿ ಸೆಕ್ಸ್ ಮಾಡಿದ್ದು ಯಾವಾಗ? ಎಂದು. ಈ ಪ್ರಶ್ನೆಗೆ ವಿಜಯ್ ದೇವರಕೊಂಡ ಅವರು ಸುಮ್ಮನೆ ನಕ್ಕಿದ್ದಾರೆ. ಆದರೆ ಆಗ ಅನನ್ಯಾ ನಾನು ಈ ಪ್ರಶ್ನೆಗೆ ಉತ್ತರ ಊಹಿಸುವುದಾಗಿ ಹೇಳಿ,. ‘ಇಂದು ಮುಂಜಾನೆ?’ ಎಂದು ಅನುಮಾನದಲ್ಲೇ ಕೇಳಿದ್ದಾರೆ. ಅದಕ್ಕೆ ವಿಜಯ್ ದೇವರಕೊಂಡ ಮುಗಳ್ನಗೆ ಬೀರಿದ್ದಾರೆ.

ಕರಣ್‌ ಇನ್ನೂ ಮುಂದುವರಿದು ಒಂದು ಪ್ರಶ್ನೆ ಕೇಳುತ್ತಾರೆ ”ನೀವು ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್‌ನಲ್ಲಿ ಅಥವಾ ರೊಮ್ಯಾನ್ಸ್‌ನಲ್ಲಿ ತೊಡಗಿದ್ದೀರ?” ಇದಕ್ಕೆ ಉತ್ತರಿಸಿರುವ ವಿಜಯ್ “ಕಾರಿನಲ್ಲಿ ಮಾಡಿದ್ದೇನೆ” ಎಂದು ಹೇಳಿದ್ದಾರೆ. ಕೂಡಲೇ ಕರಣ್, ಶೌಚಾಲಯಗಳಲ್ಲಿ ಮಾಡುತ್ತಾರೆ ಇದು ಗೊತ್ತಿದೆ. ಆದರೆ ಕಾರಿನಲ್ಲಿ ಹೇಗೆ? ಇಕ್ಕಟ್ಟಾಗುವುದಿಲ್ಲವೇ?” ನಾನಂತೂ ಎಂದೂ ಕಾರಿನಲ್ಲಿ ಪ್ರಯತ್ನಿಸಿಲ್ಲ ಯಾವಾಗಲಾದರೂ ಪ್ರಯತ್ನ ಮಾಡಬೇಕು’ ಎಂದಿದ್ದಾರೆ. ಅದಕ್ಕೆ ವಿಜಯ್ ದೇವರಕೊಂಡ, ”ಕೆಲವು ಅತಿ ಅವಸರದ ಸಂದರ್ಭಗಳಲ್ಲಿ ಮಾಡಬೇಕಾಗುತ್ತದೆ” ಎಂದು ಕಣ್ಣು ಮಿಟಕಿಸಿ ಉತ್ತರಿಸಿದ್ದಾರೆ.

ಅನಂತರ “ಇಬ್ಬರು ಸಂಗಾತಿಗಳೊಂದಿಗೆ ಯಾವಾಗಲಾದರೂ ಒಟ್ಟಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೀರ?” ಎಂದು ಪ್ರಶ್ನೆಗೆ ಇಲ್ಲವೆಂದು ಉತ್ತರ ನೀಡಿದ್ದಾರೆ ವಿಜಯ್. ಆದರೂ ಕರಣ್ ಜೋಹರ್, ” ಅಂತಹ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅವಕಾಶ ದೊರೆತರೆ ಏನು ಮಾಡುತ್ತೀರಿ’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ವಿಜಯ್, ”ನನಗೇನೂ ಅಭ್ಯಂತರವಿಲ್ಲ” ಎಂದಿದ್ದಾರೆ.

error: Content is protected !!
Scroll to Top
%d bloggers like this: