‘ಒಂದು ರೂಪಾಯಿ ವೈದ್ಯ’ ಅಸ್ತಂಗತ, ಪ್ರಧಾನಿ ಮೋದಿಯಾಗಿ ಗಣ್ಯರಿಂದ ಸಂತಾಪ

ಹಣಕ್ಕಾಗಿ ಕಾಯುತ್ತಿರುವ ವೈದ್ಯರ ನಡುವೆ ಸರಳ ಸಜ್ಜನಿಕೆಯಿಂದ ಕೇವಲ ಒಂದೇ ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಪಶ್ಚಿಮ ಬಂಗಾಳದ ಬಿರ್ಭುಮ್ ಸುಶೋವನ್ ಬಂಡೋಪಾಧ್ಯಾಯ ವಿಧಿವಶರಾಗಿದ್ದು, “ಒಂದು ರೂಪಾಯಿ-ವೈದ್ಯ” ಎಂದೇ ಖ್ಯಾತಿ ಪಡೆದಿದ್ದ ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

“ಏಕ್ ತಕಾರ್ ದಕ್ತಾರ್” ಎಂದು ಪ್ರೀತಿಯಿಂದ ಕರೆಯಲ್ಪಡುವ ಸುಶೋವನ್, ಬಿರ್ಭುಮ್‌ನ ಬೋಲ್ಪುರದಲ್ಲಿ ರೋಗಿಗಳಿಗೆ ಕೇವಲ 1 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದರು. ಇಂತಹ ಒಳ್ಳೆಯ ಸಮಾಜಸೇವಕ ಕೊನೆಯುಸಿರೆಳೆದಿದ್ದು, ಎಲ್ಲರಿಗೂ ನೋವುಂಟು ಮಾಡಿದೆ. ಇವರ ಈ ಒಳ್ಳೆಯ ಗುಣದ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ, “ಡಾ. ಸುಶೋವನ್ ಬಂಡೋಪಾಧ್ಯಾಯ ಅವರು ಮಾನವ ಚೈತನ್ಯದ ಅತ್ಯುತ್ತಮತೆಯನ್ನು ಪ್ರತಿಬಿಂಬಿಸಿದ್ದಾರೆ. ಅನೇಕ ಜನರನ್ನ ಗುಣಪಡಿಸಿದ ದಯಾಪರ ಮತ್ತು ವಿಶಾಲ ಹೃದಯದ ವ್ಯಕ್ತಿಯಾಗಿ ಅವರನ್ನು ನೆನಪಿಸಿಕೊಳ್ಳಲಾಗುವುದು. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರೊಂದಿಗೆ ನಾನು ನಡೆಸಿದ ಸಂವಾದ ನೆನಪಿಸಿಕೊಳ್ಳುತ್ತಿದ್ದೇನೆ. ಇನ್ನು ಅವರ ನಿಧನದಿಂದ ದುಃಖಿತನಾಗಿದ್ದು, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಬರೆದಿದ್ದಾರೆ.

ಡಾ. ಸುಶೋವನ್ ಅವರಿಗೆ 2020ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನ ನೀಡಿ ಗೌರವಿಸಲಾಗಿದೆ. ಅದೇ ವರ್ಷದಲ್ಲಿ, ಗರಿಷ್ಠ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಅವರ ಹೆಸರು ದಾಖಲಾಗಿತ್ತು. ಸುಶೋವನ್ ಒಮ್ಮೆ ಬೋಲ್ಪುರದಿಂದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದು, ತೃಣಮೂಲ ಕಾಂಗ್ರೆಸ್ ರಚನೆಯಾದ ನಂತರ, ಅವರು ಬಿರ್ಭೂಮ್‌ನಲ್ಲಿ ತೃಣಮೂಲದ ಮೊದಲ ಜಿಲ್ಲಾ ಅಧ್ಯಕ್ಷರಾಗಿದ್ದರು.

Leave A Reply