ಚೆಸ್ ಆಡುವಾಗ ಬಾಲಕನ ಬೆರಳನ್ನೇ ಮುರಿದ ರೋಬೋಟ್ | ಯಾಕಾಗಿ ಗೊತ್ತೇ?

ರೋಬೋಟ್ ಒಂದು ವಿಶೇಷ ಯಂತ್ರ. ಮಾನವ ತನ್ನ ಬುದ್ಧಿಮತ್ತೆಯಿಂದ ತಯಾರಿಸಿದ ಯಂತ್ರ. ನೀವು ಸಾಮಾನ್ಯವಾಗಿ ನೋಡಿರಬಹುದು. ಕೆಲವು ಕಡೆ ಚೆಸದಮ್ ಆಟದಲ್ಲಿ ರೋಬೋಟ್ ಇರುತ್ತದೆ. ಚೆಸ್ ಆಟ ಆಡಿವಾಗ ವಿಶೇಷವಾಗಿ ಈ ಯಂತ್ರ ಅಂದರೆ ರೋಬೋಟ್ ಬಳಕೆ ಮಾಡಲಾಗುತ್ತದೆ. ಇದೊಂದು ರೀತಿಯಲ್ಲಿ ರೋಬೋಟ್ ಮನುಷ್ಯನ ಜುಗಲ್ ಬಂದಿ ಆಟ ಎಂದೇ ಹೇಳಬಹುದು. ಈಗ ಈ ಆಟದ ವೈಖರಿಯಲ್ಲಿ ರೋಬೋಟ್ ಬಾಲಕನೋರ್ವನ ಕೈ ಬೆರಳನ್ನೇ ಮುರಿದಿದೆ. ಯಾಕೆ ಅಂತ ತಿಳಿಯೋಣ ಬನ್ನಿ.

ರಷ್ಯಾ ದಲ್ಲಿ ಚೆಸ್ ಆಡುವ ರೋಬೋಟ್‌ನ ‘ಆಂಡ್ರಾಯ್ಡ್ ಗ್ಯಾಂಬಿಟ್’ ಆಟವಾಡುತ್ತಿದ್ದ ಏಳು ವರ್ಷದ ಮಗುವಿನ ಬೆರಳನ್ನು ಕಟ್ ಮಾಡಿದೆ. ಅತಿ ವೇಗವಾಗಿ ಆಟವಾಡಿದ ಬಾಲಕನ ಬೆರಳನ್ನು ರೋಬೋಟ್ ಮುರಿದಿದೆ ಎಂದು ಸಂಘಟನಾ ಸಮಿತಿ ಹೇಳಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಜುಲೈ 19 ರಂದು ಈ ಘಟನೆ ನಡೆದಿದೆ. ಮಾಸ್ಕೋ ಚೆಸ್ ಓಪನ್ ಟೂರ್ನಮೆಂಟ್‌ನಲ್ಲಿ ಏಳು ವರ್ಷದ ಬಾಲಕನು ಚೆಸ್-ಆಡುವ ಯಂತ್ರದೊಂದಿಗೆ ಸ್ಪರ್ಧೆ ಮಾಡುತ್ತಿದ್ದಾಗ, ಈ ಘಟನೆ ಸಂಭವಿಸಿದೆ. ಚೆಸ್ ಆಡುವ ರೋಬೋಟ್‌ನ ‘ಆಂಡ್ರಾಯ್ಡ್ ಗ್ಯಾಂಬಿಟ್’ ಕ್ರಿಸ್ಟೋಫರ್ ಎಂಬ ಹುಡುಗನ ತೋರು ಬೆರಳನ್ನು ಹಿಡಿದು ಬಲವಾಗಿ ಹಿಂಡಿದೆ.

ಬಾಲಕ ಆತುರವಾಗಿ ತನ್ನ ಆಟ ಆಡಲು ಹೋಗಿದ್ದಾನೆ. ಆದ್ದರಿಂದ ರೋಬೋಟ್ ಹುಡುಗನ ಬೆರಳನ್ನು ಮುರಿದಿದೆ ಎಂದು ಹೇಳಿದ್ದಾರೆ. ಇದೇ ಮೊದಲ ರೀತಿ ಈ ತರ ಆಗಿದೆ. ಮಗು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.

ಪೋಷಕರು ಹೇಳುವ ಪ್ರಕಾರ, ರೋಬೋಟ್ ನಮ್ಮ ಮಗುವನ್ನು ಹಿಡಿಯುತ್ತಿದ್ದಂತೆ, ಅದನ್ನು ನೋಡಿದವರು ಓಡೋಡಿ ಬಂದು ಮಗುವನ್ನು ರೋಬೋಟ್‌ನ ಹಿಡಿತದಿಂದ ಮುಕ್ತಗೊಳಿಸಿದರು. ಸ್ಥಳೀಯ ಪ್ರಾಸಿಕ್ಯೂಟರಿಗೆ ದೂರು ನೀಡಲು ಅವರನ್ನು ಸಂಪರ್ಕಿಸಿದ್ದೇವೆ ಎಂದು ಪೋಷಕರು ಹೇಳಿದ್ದಾರೆ. ಅಲ್ಲದೇ ಲೀಗ್ ಸಂಘಟಕರೇ ಇದರ ಹೊಣೆ, ನಮ್ಮ ಮಗುವಿಗೆ ಏನಾದ್ರೂ ತೊಂದರೆ ಆಗಿದ್ದರೆ ಏನು ಮಾಡಬೇಕಿತ್ತು? ಸುರಕ್ಷತೆ ಬಗ್ಗೆ ಗಮನ ಕೊಡಬೇಕಿತ್ತು ಎಂದು ಆರೋಪಿಸಿದ್ದಾರೆ.

ರೋಬೋಟ್‌ನಿಂದ ಬೆರಳು ಮುರಿಸಿಕೊಂಡಿರುವ ಕ್ರಿಸ್ಟೋಫರ್ ಅತ್ಯುತ್ತಮ ಚೆಸ್ ಆಟಗಾರ. ಮಾಸ್ಕೋದಲ್ಲಿ ಒಂಬತ್ತು ವರ್ಷ ವಯಸ್ಸಿನ 30 ಅತ್ಯುತ್ತಮ ಆಟಗಾರರಲ್ಲಿ ಕ್ರಿಸ್ಟೋಫರ್ ಒಬ್ಬನಂತೆ. ಈಗ ಅವನ ಬೆರಳೇ ಮುರಿದಿರೋದ್ರಿಂದ, ಸ್ವಲ್ಪ ದಿನ ಚೆಸ್ ಆಡಲು ಕಷ್ಟವಾಗಬಹುದು.

ರೋಬೋಟ್ ಬಾಲಕನ ಬೆರಳು ಮುರಿಯುತ್ತಿರುವ ವೀಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ರೋಬೋಟ್‌ನ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದಾರೆ.

error: Content is protected !!
Scroll to Top
%d bloggers like this: