ಮೀನುಗಾರನಿಗೆ ಅದೃಷ್ಟದ ಬಾಗಿಲು ತೆರೆದುಕೊಟ್ಟ “ಬೃಹತ್ ಗಾತ್ರದ ಮೀನು” | ಅಂದ ಹಾಗೇ ಈ ಮೀನು ಎಷ್ಟು ಬೆಲೆಬಾಳುತ್ತೆ ಗೊತ್ತೇ?

ಅದೃಷ್ಟವೊಂದು ಮೀನಿನ ರೂಪದಲ್ಲಿ ಬಂದು ಮೀನುಗಾರನೋರ್ವನಿಗೆ ಬಂಗಾರದ ಬಾಗಿಲು ತೆರೆಯುತ್ತೆ ಎಂದು ಬಹುಶಃ ಆತನೂ ಅಂದುಕೊಂಡಿರಲಿಕ್ಕಿಲ್ಲ. ಇದೆಲ್ಲ ಅದೃಷ್ಟದ ಮಹಿಮೆ. ಹಾಗೇನೆ ಇದು ಎಲ್ಲರೂ ಒಂದು ಕ್ಷಣ ಬೆರಗಾಗಿಸುವಂತಹ ಘಟನೆ…ಬನ್ನಿ ತಿಳಿಯೋಣ.

ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ ಮೀನೊಂದು ಹಣದ ಸುರಿಮಳೆಯನ್ನೇ ಹೊತ್ತು ತಂದಿದೆ. ಆತನ ಬಲೆಗೆ ಬಿದ್ದ ಈ ಒಂದೇ ಒಂದು ಮೀನು ಇದೀಗ ಆತನನ್ನು  ಲಕ್ಷಾಧಿಪತಿಯನ್ನಾಗಿ ಮಾಡಿದೆ.
ಒಡಿಶಾದ ಭದ್ರಾಕ್‌ನ ಚಾಂದ್‌ಬಲಿಯ ಮೀನುಗಾರನೊಬ್ಬನಿಗೆ ಬರೋಬ್ಬರಿ 32 ಕೆಜಿ ತೂಕದ ಮೀನು ಬಲೆಗೆ ಬಿದ್ದಿದೆ. ಈ ಮೀನು ಬರೋಬ್ಬರಿಗೆ 3,20,000 ರೂಪಾಯಿಗೆ ಮಾರಾಟವಾಗಿದೆ ಎಂದು ಮೀನುಗಾರ ಹೇಳಿಕೊಂಡಿದ್ದು, ಬಹಳ ಸಂತಸವನ್ನು ವ್ಯಕ್ತಪಡಿಸಿದ್ದಾನೆ. ಆತ ಪಟ್ಟ ಶ್ರಮಕ್ಕೆ ಇಂದು ಆತನ ಅದೃಷ್ಟದ ಬಾಗಿಲು ತೆಗೆದಿದೆ ಎಂದೇ ಹೇಳಬಹುದು.


Ad Widget

Ad Widget

Ad Widget

Ad Widget

Ad Widget

Ad Widget

ಈ ಮೀನಿನ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ ಹಾಗೇ ಈ ಮೀನಿನ ಒಂದು ಕೆಜಿ ಮಾಂಸಕ್ಕೆ 10 ಸಾವಿರ ರೂಪಾಯಿ ಅಂತೆ. ಈ ರೇಟ್ ಕೇಳಿಯಂತೂ ಮೀನುಪ್ರಿಯರು ಒಂದು ಕ್ಷಣ ಹುಬ್ಬೇರಿಸುವಂತದ್ದು ನಿಜ.

error: Content is protected !!
Scroll to Top
%d bloggers like this: