ಗುಲ್ಬರ್ಗ: ವಿದ್ಯಾರ್ಥಿನಿಯೋರ್ವಳು ಸೇತುವೆಯ ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ಘಟನೆಯೊಂದು ಜಿಲ್ಲೆಯ ಶಹಬಾದ ಸಮೀಪದ ಕಾಗಿಣಾ ನದಿಯ ಸೇತುವೆಯಲ್ಲಿ ನಡೆದಿದೆ.
ಆತ್ಮಹತ್ಯೆ ನಡೆಸಿಕೊಂಡ ವಿದ್ಯಾರ್ಥಿನಿಯನ್ನು ರಾಜೇಶ್ವರಿ(21) ಎಂದು ಗುರುತಿಸಲಾಗಿದ್ದು, ಅವಸರವಸರವಾಗಿ ಸ್ಕೂಟಿಯಲ್ಲಿ ಬಂದ ಆಕೆ ನೋಡನೋಡುತ್ತಿದ್ದಂತೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ವಾಹನದ ನಂಬರ್ ಪ್ಲೇಟ್ ನ ಸಹಾಯದಿಂದ ಆಕೆಯ ವಿವರಗಳನ್ನು ಪಡೆದಿದ್ದು, ನದಿಗೆ ಹಾರಿದ ಯುವತಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
You must log in to post a comment.