ನಟಿ ಐಶ್ಚರ್ಯಾ ರೈ ಬಚ್ಚನ್ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರಾ?!! ವೈರಲ್ ಆದ ವೀಡಿಯೋ ನೋಡಿ…

ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಎರಡನೇ ಬಾರಿಗೆ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಎಂಬ ಅನುಮಾನವೊಂದು ಮೂಡಿದೆ. ಅವರು ಮತ್ತೆ ತಾಯಿ ಆಗುತ್ತಿದ್ದಾರೆ ಎಂಬ ಬಗ್ಗೆ ಗಾಸಿಪ್ ಹೆಚ್ಚಿದೆ. ಇಷ್ಟೆಲ್ಲ ವಿವಾದ ಹುಟ್ಟುಕ್ಕೋ ಕಾರಣ ಆಗಿರುವುದು ಆ ಒಂದೇ ಒಂದು ವಿಡಿಯೋ. ಹೌದು, ಐಶ್ವರ್ಯಾ ರೈ ಬಚ್ಚನ್ ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಪುತ್ರಿ ಜೊತೆಗೆ ಅಭಿಷೇಕ್ ಕೂಡ ಇದ್ದರು. ಈ ವೇಳೆ ಐಶ್ವರ್ಯಾ ಧರಿಸಿದ್ದ ಬಟ್ಟೆ ಮತ್ತು ಅವರು ನಡೆದು ಬಂದ ರೀತಿ ನೋಡಿ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡಿದೆ. ಅಮಿತಾಭ್ ಬಚ್ಚನ್ ಸೊಸೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಅನುಮಾನವನ್ನು ನೆಟ್ಟಿಗರು
ವ್ಯಕ್ತಪಡಿಸಿದ್ದಾರೆ. ಪ್ರೆಗ್ನೆಂಟ್ ಹೌದೋ ಅಲ್ಲವೋ ಎಂಬ ಬಗ್ಗೆ ಕುಟುಂಬದ ಕಡೆಯಿಂದ ಸ್ಪಷ್ಟನೆ ಸಿಗಬೇಕಷ್ಟೇ.

ಇತ್ತೀಚೆಗೆ ಐಶ್ವರ್ಯಾ ರೈ ಬಚ್ಚನ್ ಅವರು ಫ್ಯಾಮಿಲಿ ಜೊತೆ ನ್ಯೂಯಾರ್ಕ್‌ಗೆ ತೆರಳಿದ್ದರು. ವಾಪಸ್ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರ ಫೋಟೋ ಮತ್ತು ವೀಡಿಯೋ ತೆಗೆಯಲು ಫೋಟೋಗ್ರಾಫರ್ ಬಂದಿದ್ದರು. ಈ ಸಮಯದಲ್ಲಿ ಐಶ್ವರ್ಯಾ ಧರಿಸಿದ್ದ ಡ್ರೆಸ್ ಹೈಲೈಟ್ ಆಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಐಶ್ವರ್ಯಾ ರೈ ಅವರು ಉದ್ದನೆಯ ಗೌನ್ ರೀತಿಯ ಕಾಸ್ಟ್ಯೂಮ್ ಧರಿಸಿದ್ದಾರೆ. ಅದರ ಮೇಲೆ ಕಪ್ಪು ಬಣ್ಣದ ಕೋಟ್ ತೊಟ್ಟಿದ್ದಾರೆ. ಅಷ್ಟು ಸಾಲದಕ್ಕೆ ಹೊಟ್ಟೆ ಭಾಗ ಕಾಣದ ರೀತಿಯಲ್ಲಿ ಕೈ ಅಡ್ಡ ಇಟ್ಟುಕೊಂಡೇ ನಡೆದುಬಂದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಹಲವಾರು ಬಗೆಯಲ್ಲಿ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಐಶ್ವರ್ಯಾ ಪ್ರೆಗ್ನೆಂಟ್ ಆರಂಭಿಸಿದ್ದಾರೆ. ಐಶ್ವರ್ಯಾ ಪ್ರೆಗ್ನೆಂಟ್ ಆಗಿರುವುದರಿಂದಲೇ, ಬೇಬಿ ಬಂಪ್ ಕಾಣಬಾರದು ಎಂದು ಈ ರೀತಿ ನಡೆದುಕೊಂಡಿದ್ದಾರೆ ಎಂಬುದು ಹಲವರ ಹೇಳಿಕೆ.

error: Content is protected !!
Scroll to Top
%d bloggers like this: