ಮೂಗನ್ನು ನೆಟ್ಟಗೆ ಮಾಡಲು 5 ದಿನದ ತನ್ನ ಮಗುವನ್ನು ಮಾರಾಟ ಮಾಡಿದ ಮಹಾತಾಯಿ!!!

ಸುಂದರವಾಗಿ ಕಾಣಲು ಎಲ್ಲರೂ ಇಷ್ಟ ಪಡುತ್ತಾರೆ. ಅದಕ್ಕಾಗಿ ಬೇಕಾದಷ್ಟು ಖರ್ಚು ಕೂಡಾ ಮಾಡುತ್ತಾರೆ. ಹಾಗಂತ ಇಂಥಹ ಕೆಲಸ ಮಾಡುತ್ತಾರಾ ? ಎಂತ ಕೆಲಸ? ಬನ್ನಿ ತಿಳಿಸುತ್ತೇವೆ. ಇಂತಹ ನೀಚ ಕೆಲಸವನ್ನು ಒಬ್ಬಳು ತಾಯಿ ಮಾಡಿದ್ದಾಳೆ ಅದೂ ತನ್ನ ಮಗುವನ್ನು ಮಾರಾಟ ಮಾಡಿ.

 

ಹೌದು, ಮೂಗನ್ನು ಸುಂದರಗೊಳಿಸಿಕೊಳ್ಳಲು (ರಿನೋಪ್ಲಾಸ್ಟಿ) ಅಗತ್ಯವಿದ್ದ ಕಾಸ್ಮೆಟಿಕ್ ಸರ್ಜರಿಯ ಸುಮಾರು 3 ಲಕ್ಷ ರೂ.ಗಳ ವೆಚ್ಚ ಭರಿಸಲು ತನ್ನ 5 ದಿನದ ಶಿಶುವನ್ನು ಮಾರಾಟ ಮಾಡಿದ ಘಟನೆಯೊಂದು ‌ನಡೆದಿದೆ. ರಷ್ಯನ್ ಮಹಿಳೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಹೆಸರು ಬಹಿರಂಗಪಡಿಸದ 33-ವರ್ಷ ವಯಸ್ಸಿನ ಮಹಿಳೆಯನ್ನು ಮಾನವ ಕಳ್ಳಸಾಗಾಣಿಕೆ ಆರೋಪದಲ್ಲಿ ಬಂಧಿಸಲಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಗಂಡುಮಗುವೊಂದಕ್ಕೆ ಜನ್ಮ ನೀಡಿದ ಮಹಿಳೆಯು ಕೇವಲ 5 ದಿನಗಳ ಬಳಿಕ ಮಗುವನ್ನು ದತ್ತು ಸ್ವೀಕರಿಸುವ ತವಕದಲ್ಲಿದ್ದ ಸ್ಥಳೀಯ ದಂಪತಿಗೆ ಮಾರಿ ಬಿಟ್ಟಿದ್ದಾಳೆ.

ಮಾನವ ಕಳ್ಳಸಾಗಣೆ ಭಾಗಿಯಾಗಿರುವ ಸಂಶಯದ ಮೇರೆಗೆ ಪೊಲೀಸರು ಮೇ ತಿಂಗಳಲ್ಲಿ ಅವಳನ್ನು ವಶಕ್ಕೆ ಪಡೆದಿದ್ದರು. ಮಗುವೊಂದಕ್ಕಾಗಿ ಹಪಹಪಿಸುತ್ತಿದ್ದ ಸ್ಥಳೀಯ ದಂಪತಿಯನ್ನು ಭೇಟಿಯಾಗಿ ಮಗುವನ್ನು ಅವರಿಗೆ ಮಾರಲು ಒಪ್ಪಿಕೊಂಡಿದ್ದಾಳೆ. ಆದರೆ ಕೆಲವೇ ದಿನಗಳ ನಂತರ ಪೊಲೀಸರಿಗೆ ಇದರ ಕುರಿತು ಸುಳಿವು ಸಿಕ್ಕಿದೆ. ರಷ್ಯನ್ ಮಹಿಳೆಯನ್ನು ಹಾಗೂ ಕಾನೂನು ಬಾಹಿರವಾಗಿ ದತ್ತು ಪಡೆದ ದಂಪತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ರಷ್ಯನ್ ಮಹಿಳೆ ತಮಗೆ ಮಗುವಿನ ಜೊತೆ ಅದರ ಜನ್ಮ ಪ್ರಮಾಣ ಪತ್ರವನ್ನು ಕೂಡ ನೀಡಿದಳೆಂದು ಬಂಧನ ಬಳಿಕ ಹೊಸ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಮಗುವನ್ನು ಖರೀದಿಸಲು ತಾವು ಆಕೆಗೆ ಹಣ ನೀಡಲಿಲ್ಲ ಅದರೆ ಮೂಗಿನ ಸರ್ಜರಿ ಮಾಡಿಸಬೇಕಿದೆ ಎಂದು ಆಕೆ ಹೇಳಿದ್ದಕ್ಕೆ ಚಿಕಿತ್ಸೆಯ ವೆಚ್ಚ ಭರಿಸಿದ್ದೇವೆ ಎಂದು ಹೇಳಿದ್ದಾರೆ.

ಈಗ ಶಂಕಿತ ಮಹಿಳೆಯನ್ನು ರಷ್ಯನ್ ಫೆಡರೇಶನ್ನಿನ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ 91 ಮತ್ತು 92 ರ ಅಡಿಯಲ್ಲಿ ಬಂಧಿಸಲಾಗಿದೆ.

Leave A Reply

Your email address will not be published.