ಭಟ್ಕಳ:ನೀಟ್ ಪರೀಕ್ಷೆಗೆಂದು ಮಗಳನ್ನು ಮಂಗಳೂರಿಗೆ ಕರೆತಂದು ಹಿಂದಿರುಗುತ್ತಿದ್ದಾಗ ದುರ್ಘಟನೆ!! ಕೆಲ ಕ್ಷಣದಲ್ಲೇ ಹಾರಿ ಹೋಗಿತ್ತು ಅಪ್ಪನ ಪ್ರಾಣ

Share the Article

ಭಟ್ಕಳ: ದನವೊಂದು ಅಡ್ಡಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆಯೊಂದು ಭಟ್ಕಳ ತಾಲೂಕಿನ ಬೆಳಕೆ ಎಂಬಲ್ಲಿನ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಭಟ್ಕಳದ ವಿದ್ಯುತ್ ಗುತ್ತಿಗೆದಾರ ಜೋಸೆಫ್ ಕುಟ್ಟಿ ಜಾರ್ಜ್ ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ಇವರ ಪುತ್ರಿ ಮರಿಯಾ(16) ಗಾಯಗೊಂಡ ಪರಿಣಾಮ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಜೋಸೆಫ್ ತನ್ನ ಮಗಳನ್ನು ಮಂಗಳೂರಿನಲ್ಲಿ ನಡೆದ ನೀಟ್ ಎಕ್ಸಾಮ್ ಗೆ ಕರೆತಂದು, ವಾಪಸ್ಸು ಮನೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ಜೋಸೆಫ್ ರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

Leave A Reply