ಗಂಡ ಅಪಘಾತವಾಗಿದೆ ಅಂತ ಕರೆ ಮಾಡಿದರೆ…ಪತ್ನಿ ಬಂದು ಮಾಡಿದ್ದಾದರೂ ಏನು? ಪ್ರೀತಿ ಕೊಂದ…ಕೊಲೆಗಾತಿ….

ನೀನೇ ಸಾಕಿದ ಗಿಣಿ…ನಿನ್ನ ಮುದ್ದಿನಾ ಗಿಣಿ…ಹದ್ದಾಗಿ ಕುಕ್ಕಿತಲ್ಲೋ…ಈ ಹಾಡು ಎಲ್ಲರೂ ಕೇಳಿರಬಹುದು. ಈ ಘಟನೆ ಕೂಡಾ ಈ ಹಾಡಿಗೆ ಹೋಲಿಕೆ ಆಗುತ್ತದೆ. ಪ್ರೀತಿಸಿ ಮದುವೆಯಾದ ಯುವತಿ ತನ್ನ ಗಂಡನನ್ನೇ ಸಾಯಿಸಿದ ಘಟನೆ ಇದು. ಹೃದಯದಲ್ಲಿ ಕರುಣೆ ಇಲ್ಲದವರು ಪ್ರೀತಿಯ ಅರ್ಥ ತಿಳಿಯದವರೇ ಇಂತಹ ಕೃತ್ಯ ಎಸಗಲು ಸಾಧ್ಯ.

ಜುಲೈ 2ರಂದು ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ನಡೆದಿದ್ದ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿನ ಹಿಂದಿರುವ ಭಯಾನಕ ರಹಸ್ಯವನ್ನು 16 ದಿನಗಳ ಬಳಿಕ ಬಾಗಲಕೋಟೆ ಪೊಲೀಸರು ಹೊರ ಜಗತ್ತಿಗೆ ತೆರೆದಿಟ್ಟಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಅಪಘಾತದಲ್ಲಿ ಪ್ರವೀಣ ಸೇಬಣ್ಣವರ(30) ಎಂಬುವರು ಮೃತಪಟ್ಟಿದ್ದರು.

ಪೊಲೀಸರು ತನಿಖೆ ನಡೆಸಿದಾಗ ತಿಳಿಯಿತು ಒಂದು ಭಯಾನಕ ಸತ್ಯ. ಆರಂಭದಲ್ಲಿ ಇದನ್ನು ಅಪಘಾತವೆಂದೇ ಬಿಂಬಿಸಲಾಗಿತ್ತು. ಆದರೆ, ಈಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಇದೊಂದು ಅಪಘಾತವಲ್ಲ ಪೂರ್ವ ನಿಯೋಜಿತೆ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಅಂದಹಾಗೆ ಆರೋಪಿ ಬೇರೆ ಯಾರೂ ಅಲ್ಲ, ಪ್ರೀತಿಸಿ ಮದುವೆಯಾಗಿದ್ದ ಪತ್ನಿ ನಿತ್ಯಾ ಎನ್ನುವಾಕೆಯೇ ಮಾಸ್ಟರ್ ಪ್ಲಾನ್ ಮಾಡಿದವಳು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಈ ಗಂಡ ಎಂದು ಆತನ ಜೀವವನ್ನೇ ತೆಗೆದಿದ್ದಾಳೆ ಈ ನೀಚ ಹೆಂಡತಿ. ಪ್ರೇಮ ವಿವಾಹವಾದರೂ ಬೇರೊಬ್ಬನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ಆರೋಪಿ ನಿತ್ಯಾ, ಆತನೊಂದಿಗೆ ಸೇರಿಕೊಂಡು ಪ್ಲಾನ್ ಮಾಡಿ ಗಂಡನನ್ನೇ ಮುಗಿಸಿದ್ದಾಳೆ.

ಕಮತಗಿ ಕ್ರಾಸ್ ಬಳಿ ಜುಲೈ 2 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಕಾರಿನಲ್ಲಿ ಬಂದ ಪತ್ನಿ ಹಾಗೂ ಪ್ರಿಯಕರ ರಾಘವೇಂದ್ರ, ಪ್ರವೀಣ ಸೇಬಣ್ಣವರಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಈ ವೇಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸೇಬಣ್ಣ ತನ್ನ ಪತ್ನಿಗೆ ಕರೆ ಮಾಡಿ ನನಗೆ ಅಪಘಾತವಾಗಿದೆ ಎಂದಿದ್ದ. ಇದನ್ನು ತಿಳಿದ ನಿತ್ಯಾ, ಮತ್ತೆ ಕಾರು ತಿರುಗಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದಳು. ಕೊಲೆ ಖಚಿತವಾದ ಬಳಿಕ ಇಬ್ಬರು ಎಸ್ಕೇಪ್ ಆಗಿದ್ದರು.

ಮೇಲ್ನೋಟಕ್ಕೆ ಅಪಘಾತದಲ್ಲಿ ಮೃತಪಟ್ಟ ರೀತಿ ಶವ ಪತ್ತೆಯಾಗಿತ್ತು. ಆದರೆ, ಬೈಕ್ ಬಿದ್ದ ಜಾಗ ಹಾಗೂ ಶವದ ಮೇಲಿನ ಗಾಯ ಕೊಲೆ ಶಂಕೆ ಮೂಡಿಸಿತ್ತು. ಈ ಸಂಬಂಧ
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಮೀನಗಡ ಪೊಲೀಸರಿಗೆ ಅಸಲಿ ಸಂಗತಿ ತಿಳಿದಿದೆ. ಪತ್ನಿ ನಿತ್ಯಾ ಮೇಲೆ ಸಂಶಯ ಮೂಡಿ, ತೀವ್ರ ವಿಚಾರಣೆ ನಡೆಸಿದಾಗ ಆಕೆಯೇ ಕೊಲೆ ಮಾಡಿದ್ದಾಳೆ ಎಂಬುದು ತಿಳಿದುಬಂದಿದೆ ಎನ್ನಲಾಗಿದೆ.

error: Content is protected !!
Scroll to Top
%d bloggers like this: