ಯುವಕನೋರ್ವ ಕತ್ತು ಸೀಳಿಕೊಂಡು ಗುಡ್ಡದಿಂದ ಉರುಳಿ ಬಿದ್ದಿದ್ದು, ಸಾವು ಬದುಕಿನ ಹೋರಾಟದ ನಡುವೆ ಪ್ರಾಣ ರಕ್ಷಿಸುವಂತೆ ಗೋಗರೆದ ಘಟನೆಯೊಂದು ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಕತ್ತು ಸೀಳಿಕೊಂಡ ಯುವಕನನ್ನು ಹಾವೇರಿ ಮೂಲದ ನವೀನ್ ದೊಡ್ಮನಿ(30) ಎಂದು ಗುರುತಿಸಲಾಗಿದೆ. ಯುವಕ ಗುಡ್ಡದ ಮೇಲಿಂದ ಬಿದ್ದಿದ್ದು, ಕತ್ತು ಸೀಳಿಕೊಂಡಿರುವ ರೀತಿಯಲ್ಲಿ ರಕ್ತ-ಸಿಕ್ತವಾದ ಬಟ್ಟೆಯೊಂದಿಗೆ ಜನರನ್ನು ಕಂಡ ಆತ ಪ್ರಾಣ ರಕ್ಷಿಸುವಂತೆ ಗೋಗರೆದಿದ್ದಾನೆ ಎನ್ನಲಾಗಿದೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಪೊಲೀಸರು ಆಗಮಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದು, ಕೊಲೆ ಯತ್ನ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
You must log in to post a comment.