ಅಪ್ರಾಪ್ತ ಹುಡುಗಿಯಿಂದ ಪ್ರೀತಿ ನಿರಾಕರಣೆ | ಹತಾಶ ಪ್ರೇಮಿ ಮಾಡಿದ ಈ ದುಷ್ಕೃತ್ಯ

ಪ್ರೇಯಸಿಯೊಬ್ಬಳು ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಹೈ ವೋಲ್ಟೇಜ್ ವಿದ್ಯುತ್ ಟ್ರಾನ್ಸ್ ಮಿಷನ್ ಟವರ್ ಮೇಲೆ ಹತ್ತಿ ಕುಳಿತ ಘಟನೆಯೊಂದು ಚೈನೈ ನ ಕ್ರೋಮ್ ಪೇಟ್ ನಲ್ಲಿ ನಡೆದಿದೆ.

ರಾಧಾ ನಗರದ ನಿವಾಸಿ ಕೃಷ್ಣ ( 19 ) ಎಂಬಾತನೇ ಈ ಪ್ರೇಮಿ ಈ ದುಸ್ಸಾಹಸಕ್ಕೆ ಇಳಿದದ್ದು. ಪೈಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಈತ ತನ್ನ ಪ್ರದೇಶದ 15 ವರ್ಷ ಅಪ್ರಾಪ್ತ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದ. ಒಂದು ದಿನ ಅವಳ ಬಳಿ ಮದುವೆ ಪ್ರಸ್ತಾಪ ಇಟ್ಟ. ಆದರೆ ಆಕೆ ನಿರಾಕರಿಸಿದ ಕಾರಣ ಈತ ಈ ದುಸ್ಸಾಹಸಕ್ಕೆ ಇಳಿದಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಘಟನೆ ಸ್ಥಳಕ್ಕೆ ಪೊಲೀಸ್, ಅಗ್ನಿ ಶಾಮಕ ಇಲಾಖೆ ಹಾಗೂ ರಕ್ಷಣೆ ತಂಡದವರು ಬಂದು ಶಾಂತಿ ಮಾತುಕತೆ ನಡೆಸಿದರೂ ಒಪ್ಪದ ಇವನು ನಂತರ ಆಕೆಯನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಕೆಳಗೆ ಇಳಿದಿದ್ದಾನೆ.

ಘಟನೆಯಿಂದ ಬೇಸತ್ತು ಪೊಲೀಸ್ ರು ಆತನನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಈತನ ಕಾರಣದಿಂದಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ ಉಪನಗರದ ರೈಲು ಸೇವೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಅಡ್ಡಿಯಾಗಿತ್ತು.

ಒಟ್ಟಾರೆ ಈ ಪ್ರೀತಿ ಏನೆಲ್ಲಾ ಮಾಡುತ್ತೆ ಅನ್ನೋದೇ ಒಂದು ವಿಚಿತ್ರ. ಈ ದುಸ್ಸಾಹಸಕ್ಕೆ ಇಳಿದ ಈ ಯುವಕ ವಿದ್ಯುತ್ ಪ್ರವಹಿಸಿ ಏನಾದರೂ ಅವಘಡ ಸಂಭವಿಸಿದರೆ ಏನಾಗುತ್ತಿತ್ತು ಎಂದು ಸ್ಥಳೀಯರ ಮಾತು

error: Content is protected !!
Scroll to Top
%d bloggers like this: