ಬೆಳ್ತಂಗಡಿ : ಅಡಿಕೆ ಮರದಿಂದ ಕೆಳಕ್ಕೆ ಬಿದ್ದು ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಭೀರ

Share the Article

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೊಬ್ಬರು ಅಡಿಕೆ ಮರಕ್ಕೆ ಔಷಧ ಸಿಂಪಡಿಸುವುದಕ್ಕೆ ಹೋಗಿ ಮರದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಇಂದು (ಜು.17) ಸಂಜೆ ಬೆಳ್ತಂಗಡಿಯ ಕಳೆಂಜದಲ್ಲಿ ನಡೆದಿದೆ.

ಔಷಧಿ ಸಿಂಪಡಣೆಯ ವೇಳೆ ಅಡಿಕೆ ಮರಕ್ಕೆ ಹತ್ತುವ ರೋಪ್ ಕ್ಲೈಂಬರ್ ಜಾರಿದ ಪರಿಣಾಮ ಗ್ರಾ.ಪಂ ಮಾಜಿ ಅಧ್ಯಕ್ಷ ನಿತ್ಯಾನಂದ ರೈ (45ವ) ಗಂಭೀರ

ಗಾಯಗೊಂಡಿದ್ದಾರೆ. ಮಳೆ ಕಡಿಮೆ ಇದ್ದಿದ್ದರಿಂದ ಹಾಗೂ ಕೆಲಸಕ್ಕೆ ಜನ ಸಿಗದೆ ಇದ್ದುದರಿಂದ ಗುತ್ತಿಮಾರು ನಿವಾಸಿ ನಿತ್ಯಾನಂದ ರೈತಾವೇ ಅಡಿಕೆ ಮರಕ್ಕೆ ಹತ್ತಿದ್ದರು ಎನ್ನಲಾಗಿದೆ. ರೋಪ್ ಕ್ಲೈಂಬರ್ ಜಾರಿ ಅವರು ಕೆಳಗೆ ಬಿದ್ದು ತಲೆಗೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಮನೆಯವರು ಹಾಗೂ ಸ್ಥಳೀಯರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

Leave A Reply