ಬೆಳ್ತಂಗಡಿ : ಬಾವಿಯೊಳಗೆ 5 ಅಡಿ ಉದ್ದದ ಹಾವು, ಉರಗ ತಜ್ಞರಿಂದ ಸತತ ಪ್ರಯತ್ನದ ಮೂಲಕ ರಕ್ಷಣೆ

ಬೆಳ್ತಂಗಡಿ : ಬಾವಿಯೊಳಗೆ ಬಿದ್ದಿದ್ದ ನಾಗರಹಾವಿನ ರಕ್ಷಣೆ ಕಾರ್ಯಾಚರಣೆಯೊಂದು ನಿನ್ನೆ ಮಧ್ಯಾಹ್ನ ನಡೆದಿತ್ತು. ಮಧ್ಯಾಹ್ನ ಬೆಳ್ತಂಗಡಿಯ ಸುಬ್ರಾಯ ಪ್ರಭು ಎಂಬುವವರ ಬಾವಿಯಲ್ಲಿ ಸರಿಸುಮಾರು 5 ಅಡಿ ಉದ್ದದ ನಾಗರಹಾವು ಪತ್ತೆಯಾಗಿರುತ್ತದೆ.

ಮನೆಮಂದಿ ನಾಗರಹಾವು ಬಾವಿಯೊಳಗೆ ಇರುವುದನ್ನು ಕಂಡ ಕೂಡಲೇ ಧರ್ಮಸ್ಥಳ ಉರಗ ಪ್ರೇಮಿ ಹಾಗೂ ಉರಗ ತಜ್ಞರಾದ ಸ್ನೇಕ್ ಪ್ರಕಾಶ್ ಇವರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞರು , ಬಾವಿಯು 50 ಅಡಿ ಆಳ ಇದ್ದ ಕಾರಣ ಸತತ ಎರಡು ಗಂಟೆಗಳ ಕಾರ್ಯಾಚರಣೆ ಮಾಡಿದ್ದಾರೆ. ನಂತರ ಸತತ ಪ್ರಯತ್ನದಿಂದ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.

ನಾಗರ ಹಾವನ್ನು ಮನೆಯ ಬಾವಿಯಿಂದ ಶ್ರಮಪಟ್ಟು ತೆಗೆದ ಉರಗ ತಜ್ಞರಿಗೆ ಮನೆಮಂದಿ ಧನ್ಯವಾದ ತಿಳಿಸಿದ್ದಾರೆ. ಈ ಮೂಲಕ ಮನೆ ಮಂದಿಯ ಭಯವಂತೂ ಹೋಗಲಾಡಿಸಿದ್ದಾರೆ ಉರಗ ತಜ್ಞರು.

Leave A Reply

Your email address will not be published.