ಕಡಬ:ಕಟ್ಟಡ ಕಾಮಗಾರಿ ವೇಳೆ ಮಹಡಿ ಮೇಲಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಶಸ್ತ್ರಚಿಕಿತ್ಸೆಗೊಳಪಟ್ಟು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕಡಬ ಬಂಟ್ರ ಗ್ರಾಮದ ಕಾಯಂದೂರು ನಿವಾಸಿ ಗಿರೀಶ್ ರೈ ಅವರ ಮನೆಗೆ ಕಡಬ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಭೇಟಿ ನೀಡಿ ಅಕ್ಕಿ, ದಿನಸಿ ನೀಡಿ ಸಾಂತ್ವನ ಹೇಳಿದರು.
ಕಳೆದ ಕೆಲ ದಿನಗಳ ಹಿಂದೆ ಕಡಬದ ಪಂಜ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರ ಕಾಮಗಾರಿ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆ ನಡೆದಿದ್ದು,ಸದ್ಯ ಹಾಸಿಗೆಯಿಂದ ಮೇಲೇಳಲಾಗದೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈ ವಿಚಾರ ತಿಳಿದ ಕಡಬ ಠಾಣಾ ಎಸ್.ಐ ಆಂಜನೇಯ ರೆಡ್ಡಿ ಮನೆಗೆ ಭೇಟಿ ನೀಡಿ ದಿನ ಬಳಕೆಯ ಸಾಮಗ್ರಿಗಳ ನೀಡಿ ಸಾಂತ್ವನ ನೀಡಿದ್ದು,ಈ ಸಂದರ್ಭ ಕಡಬ ಠಾಣಾ ಎ.ಎಸ್.ಐ ಸುರೇಶ್, ಸಿಬ್ಬಂದಿಗಳಾದ ಭವಿತ್ ರೈ ಹಾಗೂ ನಾರಾಯಣ ಪಾಟಾಳಿ, ಕಡಬದ ಸಾಮಾಜಿಕ ಕಾರ್ಯಕರ್ತ ರಘುರಾಮ್ ನಾಯ್ಕ್ ಜೊತೆಗಿದ್ದರು.
You must log in to post a comment.