ವರ ಮಾಡಿದ ಕೆಲಸದಿಂದ ಮದುವೆ ಮಂಟಪದಲ್ಲೇ ನಾಚಿ ನೀರಾದ ವಧು..!

ಈ ಬಾರಿ ಇನ್ನೊಂದು ಹೊಚ್ಚ ನವನವೀನ ಮದುವೆಯ ವೀಡಿಯೋ ನಿಮ್ಮ ಮುಂದೆ ತಂದಿದ್ದೇವೆ. ಎಲ್ಲರಿಗೂ ತಿಳಿದಿರುವ ಹಾಗೇ, ಮದುವೆ ಎಂಬುದು ಕೇವಲ ಹೆಣ್ಣು ಗಂಡಿನ ಸಮ್ಮಿಲನ ಮಾತ್ರವಲ್ಲ. ಎರಡು ಭಿನ್ನ ವಿಚಾರಧಾರೆ ಇರುವ ವಿಭಿನ್ನ‌ ವ್ಯಕ್ತಿತ್ವದ ಕುಟುಂಬಗಳನ್ನು ಬೆಸೆಯುವ ಸಂಬಂಧ. ಮದುವೆ ಎಂದು ಗೊತ್ತಾದಾಗ ಒಂದು ಹೆಣ್ಣು‌ಗಂಡಲ್ಲಿ ಏನೋ ಒಂದು ನವಿರಾದ ತಲ್ಲಣಗಳು ಮೂಡುತ್ತದೆ. ಸಾವಿರ ಆಸೆಯ ಕಾಮನ ಬಿಲ್ಲುಗಳು ಕಣ್ಣ ಮುಂದೆ ಬರುತ್ತದೆ.

ಈ ಮನಸ್ಸಿನ ಬಡಿತಗಳೆಲ್ಲ ಒಂದು ತಹಬದಿಗೆ ಬಂದು ನಿಲ್ಲುವುದೇ ಗಂಡು ಹೆಣ್ಣು ತಾಳಿ ಕಟ್ಟಲು ಕುಳಿತಾಗ. ಹೌದು ಈ ವೀಡಿಯೋದಲ್ಲೂ ಗಂಡು ಹೆಣ್ಣು ಮದುವೆ ಮಂಟಪದಲ್ಲಿ ಅಂಥದ್ದೊಂದು ನವಿರಾದ ಸಂದರ್ಭ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮಂಟಪದಲ್ಲಿ ವಿವಾಹ ಶಾಸ್ತ್ರಗಳು ನೆರೆವೇರುತ್ತಿದೆ. ವರ ವಧುವಿನ ಹಣೆಗೆ ಕುಂಕುಮ ಇಡುತ್ತಿದ್ದಂತೆ ಎಲ್ಲರೆದುರೇ ವಧುವಿನ ಕೆನ್ನೆಗೆ ಸಿಹಿ ಮುತ್ತೊಂದನ್ನು ನೀಡುತ್ತಾನೆ. ವರ ಈ ರೀತಿ ಮಾಡಬಹುದು ಎನ್ನುವುದನ್ನು ವಧು ಊಹಿಸಿಯೂ ಇರಲಿಲ್ಲ ಎನ್ನುವುದು ಆಕೆಯ ಪ್ರತಿಕ್ರಿಯೆಯಿಂದಲೇ ತಿಳಿಯುತ್ತದೆ. ತನ್ನ ಮನದರಸಿಯ ಸೌಂದರ್ಯ ಕಂಡು ವರ ಮಹಾಶಯ ಈ ರೀತಿ ಮಾಡಿದನೋ? ಜೀವನ ಪೂರ್ತಿ ಸಿಹಿಯನ್ನೇ ನಿನ್ನ ಪಾಲಿಗೆ ನೀಡುತ್ತೇನೆ ಎಂಬ ಸಂದೇಶ ನೀಡುವ ಪರಿಯೋ ಗೊತ್ತಿಲ್ಲ. ಆದರೆ ಆ ಕ್ಷಣ ಮಾತ್ರ ನಿಜಕ್ಕೂ ಸುಂದರವಾಗಿತ್ತು.

ಮದುವೆಗೆ ಸಂಬಂಧಿಸಿದ ಈ ವಿಡಿಯೋವನ್ನು ವೆಡ್ಡಿಂಗ್ ವರ್ಲ್ಡ್ ಪೇಜ್ ಹೆಸರಿನ ಇನ್ಸಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೊವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ಇಷ್ಟ ಪಡುತ್ತಿದ್ದಾರೆ.

error: Content is protected !!
Scroll to Top
%d bloggers like this: