16 ರ ಹರೆಯದ ಬಾಲಕಿಯರಿಂದ “ಓರ್ವ” ನಿಗಾಗಿ ಬೀದಿಯಲ್ಲೇ ಗ್ಯಾಂಗ್ ವಾರ್!!! ವೀಡಿಯೋ ವೈರಲ್

ಹದಿಹರೆಯದ ಪ್ರೀತಿ ಒಂಥರಾ ಪೊಸೆಸಿವ್ ನೆಸ್ ಜಾಸ್ತಿ ತುಂಬಿರೋ ಪ್ರೀತಿ. ನನ್ನದು, ನನ್ನವನು ಅನ್ನೋ ಭಾವನೆ ಹೆಚ್ಚಾಗಿ ತುಂಬಿರುತ್ತೇ ಈ ಪ್ರಾಯದಲ್ಲಿ. ಹಾಗಾಗಿಯೇನೋ ಪ್ರೀತಿಯ ಬಲೆಯಲ್ಲಿ ಬೀಳಬೇಡಿ ಎಂದರೂ ಯುವಕ ಯುವತಿಯರು ಪ್ರೇಮದ ಬಲೆಯಲ್ಲಿ ಬೀಳುತ್ತಾರೆ. ಆ ಪ್ರಾಯ ಅಂತಹುದು. ಸಂಗತಿಯ ಸಾಂಗತ್ಯ ಬಯಸುವ ವಯಸ್ಸು ಅದು. ಈಗ ನಾವು ಅಂಥದ್ದೇ ಒಂದು ಪ್ರೀತಿಯ ಘಟನೆಯ ಅವಾಂತರದ ಮಾಹಿತಿಯನ್ನು ಕೊಡುತ್ತಿದ್ದೇವೆ. ಅದೇನೆಂದು ಇಲ್ಲಿ ಓದಿ.

 

ಇನ್ನೂ 1 6 ತುಂಬದ ಬಾಲಕಿಯರು ಇವರಿಬ್ಬರು. ಆದರೆ ಇಬ್ಬರೂ ಕಿತ್ತಾಡುತ್ತಿದ್ದಾರೆ. ಒಬ್ಬಾಕೆ ತನ್ನ ಬಾಯ್‌ಫ್ರೆಂಡ್ ಎಂದು ಹೇಳಿದರೆ.. ಮತ್ತೊಬ್ಬಳು ತನ್ನವನು ಎಂದು… ಹೀಗೆ ಇಬ್ಬರು ಹುಡುಗಿಯರು ಗ್ಯಾಂಗ್ ವಾರ್‌ಗೆ ಇಳಿದಿದ್ದಾರೆ.

ಹದಿನಾರು ವರ್ಷವೂ ಆಗದ ಹುಡುಗಿಯರು ತಮ್ಮ ಸ್ನೇಹಿತರೊಂದಿಗೆ ಕಾಲುದಾರಿಯಲ್ಲಿ ನಡೆಯುತ್ತಿದ್ದರು. ಮಾತಿನ ಚಕಮಕಿ ನಡೆದು ತಲೆಗೂದಲನ್ನು ಹಿಡಿದುಕೊಂಡು ಪಾದಚಾರಿ ಮಾರ್ಗದಲ್ಲೇ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ನಂತರ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

ವಿಡಿಯೋ ಪ್ರಕಾರ, ಉತ್ತರಾಖಂಡದ ಹಲ್ಲಾ ನಿಯ ಹೀರಾ ನಗರ ಚೌಕಿ ಪ್ರದೇಶದ ಪೊಲೀಸ್ ಯೋಗ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಪ್ರಿಯಕರನ ವಿಚಾರವಾಗಿ ಜಗಳವಾಡಿದ ಇಬ್ಬರು ಹುಡುಗಿಯರನ್ನು ಬೆಂಬಲಿಸಲು ಅವರ ಗ್ಯಾಂಗ್‌ನ ಸದಸ್ಯರು ಬಂದಿದ್ದಾರೆ. ಈ ಮಾರಾಮಾರಿ ಯಾವುದೇ ಗ್ಯಾಂಗ್ ವಾರ್ ಗೆ ಸರಿಸಾಟಿಯಾಗಿತ್ತು.

ಅಂತೂ ಓರ್ವ ಯುವಕನಿಗೋಸ್ಕರ ಇಬ್ಬರು ಹದಿಹರೆಯದ ಬಾಲಕಿಯರು ಜೊತೆಗೆ ಇವರ ಸ್ನೇಹಿತರ ಹೊಡೆದಾಟ ಎಲ್ಲೆಡೆ ವೈರಲ್ ಆಗಿದೆ. ಹಾಗಾದರೆ ಈ ಮಾತು ನಿಜ ಅಲ್ಲವೇ, ಅದೇ, ” ಪ್ರೀತಿ ಕುರುಡು” ” ಪ್ರೀತಿಗೆ ಕಣ್ಣಿಲ್ಲ” ಎಂದು.

Leave A Reply

Your email address will not be published.