ದುಬೈ :ಅಲ್ ಅಮೀನ್ ಪೆರುವಾಯಿ (ಯುಎಇ) 8ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ನೇಮಕ

ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿ ಯ 8ನೇ ವಾರ್ಷಿಕ ಮಹಾಸಭೆ, ಈದ್ ಮಿಲನ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಶಾರ್ಜಾದ ಅಲ್ ಫರೀಜ್ ರೆಸ್ಟೋರೆಂಟ್ ಅಡಿಟೋರಿಯುಮ್ ನಲ್ಲಿ ಬಕ್ರೀದ್ ಹಬ್ಬದಂದು ನಡೆಯಿತು.
ಕಳೆದ 8 ವರುಷಗಳಿಂದ
ಬಡಹೆಣ್ಣು ಮಕ್ಕಳ ವಿವಾಹಕ್ಕೆ ಸಹಕಾರ, ಸೂರಿಲ್ಲದ ನಿರ್ಗತಿಕ ಕುಟುಂಬ ಕ್ಕೆ ಆಶ್ರಯ ಕಲ್ಪಿಸುವ, ಶಿಕ್ಷಣ ಉತ್ತೇಜನ ಕಾರ್ಯಕ್ರಮ ಮತ್ತು ಪ್ರೋತ್ಸಾಹ , ಬಡ ನಿರ್ಗತಿಕ ಕುಟುಂಬಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಸಹಾಯ , ಪ್ರಕೃತಿ ವಿಕೋಪ ಸಂದರ್ಭ ಕೈಲಾದ ಸಹಾಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು , ಪೆರುವಾಯಿ ನಾಡಿನ ಸಮುದಾಯ ಅಲ್ಲದೆ ಇತರ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿರಂತರ ಸೇವೆ ಗೈಯ್ಯುತ್ತಿರುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿರುವ ಪೆರುವಾಯಿ ನಾಡಿನ ಅನಿವಾಸಿ ಭಾರತೀಯ ಸಹೃದಯಗಳು ಒಟ್ಟು ಸೇರಿಕೊಂಡು ರಚಿಸಿದ ಅಲ್ ಅಮೀನ್ ಪೆರುವಾಯಿ ಯುಎಇ ಸಮಿತಿಯು 8 ನೇ ವರುಷದ ಸಂಭ್ರಮಾಚಣೆಯಲ್ಲಿದೆ.

ಅಧ್ಯಕ್ಷ : ರಿಯಾಜ್ ಮುಚ್ಚಿರಪದವು

ಸಮಿತಿಯ ಉಪಾಧ್ಯಕ್ಷ ಹಮೀದ್ ಹಾಜಿ ದೈಗೋಳಿಯವರ ಅಧ್ಯಕ್ಷತೆ ಯಲ್ಲಿ ಕಾರ್ಯಕ್ರಮ ನಡೆಯಿತು. ಇಬ್ರಾಹಿಂ ಮುಚ್ಚಿರಪದವು ,ಅಝೀಝ್ ದಂಡೆಪುಣಿ, ಹಮೀದ್ ಕುಂಬ್ಲೆ, ಸಮೀರ್ ದರ್ಖಾಸ್ ಪೆರುವಾಯಿ, ಶಾಫಿ ಮುಚ್ಚಿರಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾನವೀಯ ಮೌಲ್ಯಗಲಿಗೆ ಪ್ರೋತ್ಸಾಹಿಸುತ್ತ, ಸಮಿತಿಯು ಮುಂದಿನ ಒಂದು ವರ್ಷ ದಲ್ಲಿ ಕೈಗೊಳ್ಳಬೇಕಾದ ಸಮುದಾಯ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಕ್ರಿಯಾ ಯೋಜನೆಯನ್ನು ಈ ಸಂದರ್ಭದಲ್ಲಿ ತಯಾರಿಸಲಾಯಿತು.

ಪ್ರಧಾನ ಕಾರ್ಯದರ್ಶಿ :- ಸಮೀರ್ ದರ್ಖಾಸ್ ಪೆರುವಾಯಿ

ನೂತನ ಕಾರ್ಯ ಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಸಮಿತಿಯ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿಯಾಜ್ ಮುಚ್ಚಿರ ಪದವು , ಗೌರವಾಧ್ಯಕ್ಷ ರಾಗಿ ಇಬ್ರಾಹಿಂ ಮುಚ್ಚಿರ ಪದವು, ಉಪಾಧ್ಯ ಕ್ಷ ರಾಗಿ ಇಬ್ರಾಹೀಂ ಮುಳಿಯ, ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ದರ್ಖಾಸ್ ಪೆರುವಾಯಿ, ಜೊತೆ ಕಾರ್ಯದರ್ಶಿಯಾಗಿ ಹಮೀದ್ ಹಾಜಿ ದೈಗೋಳಿ ಹಾಗೂ ಬಾತಿಶ್ ಕಾನ ಪೆರುವಾಯಿ, ಕೋಶಾಧಿಕಾರಿ ಯಾಗಿ ಮೂಸ ಸೇನೆರಪಾಲು , ರಿಸೀವರ್ಸ್ ಗಳಾಗಿ ಶಿಹಾಬ್ ದುಬೈ, ಹನೀಫ್ ದಂಡೆಪುಣಿ ಮತ್ತು ಶರಫುದ್ದೀನ್ ಬಡಿಯಡ್ಜ ರವರನ್ನು ಆಯ್ಕೆ ಮಾಡಲಾಯಿತು.

ನಾಡಿನ ಸಾಧಕರಿಗೆ ಗೌರವಾರ್ಪಣ ಕಾರ್ಯಕ್ರಮ :-

ಶಿಕ್ಷಣ ಹಾಗೂ ಸಮಾಜ ಅಭಿವೃದ್ಧಿ ಕ್ಷೇತ್ರದಲ್ಲಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆಯಿಗೈದ ಮಹಮ್ಮದ್ ಪೆರುವಾಯಿ ಇವರಿಗೆ ಅಲ್ ಅಮೀನ್ ಸಮಿತಿ ಕಡೆಯಿಂದ ಗೌರವಾರ್ಪಣ
ಮಾಡಿ, ಸನ್ಮಾನಿಸಲಾಯಿತು.
ಗೌರವ ಸ್ವೀಕಾರ ಸ್ವೀಕರಿಸಿ ಮಾತಾಡಿದ ಮಹಮ್ಮದ್ ಪೆರುವಾಯಿ ರವರು ಅಲ್ ಅಮೀನ್ ಸಮಿತಿಯು ಸಾಮುದಾಯಿಕ ಅಭಿವೃದ್ಧಿ ಕಾರ್ಯ,ಶಿಸ್ತುಬದ್ಧ ಸದಸ್ಯರ ಪಾಲು ದಾರಿಕೆ ಬಗ್ಗೆ ಶ್ಲಾಘಿಸಿ,ಶುಭ ಹಾರೈಸಿದರು.

ಸಮೀರ್ ದರ್ಖಾಸ್ ಉದ್ಘಾಟಿಸಿ , ಶಾಫಿ ಮುಚ್ಚಿರ ಪದವು ಸ್ವಾಗತಿಸಿದರು.ಸಿದ್ದೀಕ್ ಕಾನ ವಂದಿಸಿದರು. ಆರೀಫ್ ಕುಂಬಳಕೊಡಿ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.