ಕನ್ಹಯ್ಯಾ ರೀತಿಯಲ್ಲಿಯೇ ನಿನ್ನ ಮರ್ಡರ್| ಅರ್ಚಕರಿಗೆ ಬಂತು ಬೆದರಿಕೆ ಪತ್ರ!

ದೇವಸ್ಥಾನದ ಅರ್ಚಕರೋರ್ವರಿಗೆ ಬೆದರಿಕೆ ಪತ್ರವೊಂದು ಬಂದಿದೆ. ಅದೇನೆಂದರೆ ದೇವಸ್ಥಾನ ತೊರೆಯದೆ ಇದ್ದಲ್ಲಿ 10 ದಿನಗಳಲ್ಲಿ ತಲೆ ಕಡಿಯುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ. ಈ ಘಟನೆ ನಡೆದಿರುವುದು ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಎಂಎಸ್‌ಜೆ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ದೇವಸ್ಥಾನದ ಅರ್ಚಕರಿಗೆ. ಮುಂದುವರಿದು ದೇವಸ್ಥಾನ ತೊರೆಯದೆ ಇದ್ದಲ್ಲಿ 10 ದಿನಗಳಲ್ಲಿ ತಲೆ ಕಡಿಯುವುದಾಗಿ ಆ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.

 

ಈ ಪತ್ರದಲ್ಲಿ ಬರೆದಿರುವುದನ್ನು ಕಡೆಗಣಿಸಿದರೆ ಮುಂದೆ ಸಂಭವಿಸಬಹುದಾದ ಅನಾಹುತಕ್ಕೆ ದೇವಾಲಯದ ಅರ್ಚಕನೇ ಹೊಣೆ ಎಂದು ಪತ್ರದಲ್ಲಿ ಹೇಳಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸಂಘಟನೆಗಳು ಆಗ್ರಹಿಸಿವೆ.

ಕಾಲೇಜಿನಲ್ಲಿ ನಿರ್ಮಿಸಿರುವ ದೇವಸ್ಥಾನದ ಅರ್ಚಕರಿಗೆ ಬೆದರಿಕೆ ಹಾಕಿರುವ ಪ್ರಕರಣ ಹೊರ ಬರುತ್ತಿದ್ದಂತೆಯೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾಲೇಜು ಗೇಟ್‌ಗೆ ಬೀಗ ಜಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ. ಇನ್ನು ಈ ಪತ್ರದಲ್ಲಿ ಉದಯಪುರ ಘಟನೆಯನ್ನು ಪ್ರಸ್ತಾಪಿಸಿರುವ ಕಾರಣ ಘಟನೆಯ ಚರ್ಚೆ ಎಲ್ಲೆಡೆ ಹಬ್ಬಿದೆ.

ಪ್ರಕರಣದ ಬಗ್ಗೆ ದೂರು ದಾಖಲಿಸಿರುವ ಪೊಲೀಸರು ದೇವಾಲಯದ ಎದುರು ಅಂಟಿಸಲಾದ ಈ ಪತ್ರವನ್ನು ತೆಗೆದುಹಾಕಿದ್ದಾರೆ. ಪ್ರಕರಣ ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

Leave A Reply

Your email address will not be published.