ಪೆದ್ದಪಲ್ಲಿ : ನಿಜ ಜೀವನದಲ್ಲಿ ನಡೆಯುವ ಘಟನೆಗಳು ಕೆಲವೊಮ್ಮೆ ಯಾವ ಸಿನಿಮಾಗಳಿಗೂ ಕಡಿಮೆ ಇರುವುದಿಲ್ಲ. ಅಂಥದ್ದೇ ಒಂದು ಘಟನೆ ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದಿದೆ. ಬ್ಲಾಕ್‌ಬಸ್ಟರ್ ಬಾಹುಬಲಿ ಸಿನಿಮಾದ ದೃಶ್ಯವೊಂದನ್ನು ನೆನಪಿಸುವ ಘಟನೆ ಅಲ್ಲಿ ನಡೆದಿದೆ.
ತೆಲಂಗಾಣ ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಓಡಾಡುವುದ ಪರದಾಡುವಂತಾಗಿದೆ. ಪೆದ್ದಪಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಸುರಯಪಲ್ಲಿ, ಪೋತಾರಂ, ಸಿರಿಪುರಂ, ಬೆಸ್ತಪಲ್ಲಿ, ವಿಲೋಚವರಂ, ಮರಿವಾಡ ಗ್ರಾಮಗಳು ಜಲಾವೃತಗೊಂಡಿವೆ. ಇಂಥ ಗ್ರಾಮವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ.
ಇಂಥ ಭೀಕರ ಪರಿಸ್ಥಿತಿಯ ನಡುವೆ ಮರಿವಾಡ ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿಯೇ ಎರಡು ತಿಂಗಳ ಮಗುವೊಂದನ್ನು ‘ಪೆದ್ದ’ ಪ್ಪ ಅಂದರೆ ದೊಡ್ಡಪ್ಪ ಒಬ್ಬರು ಮಗುವನ್ನು ಪಾತ್ರೆಯಲ್ಲಿ ಇಟ್ಟುಕೊಂಡು ರಕ್ಷಣೆ ಮಾಡಿದ್ದಾರೆ. ಈ ಘಟನೆ ಬಾಹುಬಲಿ ಚಿತ್ರವನ್ನು ನೆನಪಿಸಿದೆ. ಮಗುವನ್ನು ಹಾಸಿಗೆಯಲ್ಲಿ ಸುತ್ತಿ, ಅದನ್ನು ಪಾತ್ರೆಯಲ್ಲಿ ಇಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು, ಭುಜದ ಮಟ್ಟಗಿನ ಪ್ರವಾಹದ ನೀರಿನಲ್ಲಿ ಸುರಕ್ಷಿತವಾಗಿ ನೀರನ್ನು ದಾಟಿದ್ದಾರೆ. ಈ ಅಪರೂಪದ ಸಾಹಸಮಯ ದೃಶ್ಯವನ್ನು ಅಲ್ಲಿನವರು ವಿಡಿಯೋ ಮಾಡಿದ್ದಾರೆ. ಈಗ ಇದು ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆಗಳ ಸುರಿಮಳೆ ಬಂದಿದೆ. ಈ ಸನ್ನಿವೇಶವನ್ನು ಹೆಚ್ಚಿನವರು ಬಾಹುಬಲಿ ಚಿತ್ರ ಕ್ಕೆ ಕೊಲ್ಲಾಜ್ ಮಾಡಿಸಿ ಶೇರ್ ಮಾಡಲಾಗುತ್ತಿದೆ.
ಅವರ ಕುಟುಂಬ ಪ್ರವಾಹಕ್ಕೆ ಸಿಲುಕಿತ್ತು. ಅವರು ನೀರನ್ನು ದಾಟಿ ಇನ್ನೊಂದು ಕಡೆ ಸೇರಬೇಕಿತ್ತು. ಮಗುವಿನ ಅಮ್ಮನಿಗೆ ಎರಡು ತಿಂಗಳ ಮಗುವನ್ನು ಹೊತ್ತುಕೊಂಡು ಈ ಪ್ರವಾಹದ ನೀರನ್ನು ದಾಟುವುದು ಅಸಾಧ್ಯ ಆಗಿತ್ತು. ಕುತ್ತಿಗೆಯವರೆಗೆ ಏರಿ ಬರುತ್ತಿರುವ ನೀರನ್ನು ದಾಟಿ ಹೋಗುವುದು ಎಂದರೆ ದುಸ್ಸಾಹಸದ ಮಾತೇ. ಮಗುವಿನ ಪೆದ್ದಪ್ಪ ಅಂದರೆ ಮಗುವಿನ ದೊಡ್ಡಪ್ಪ ರಾಮಮೂರ್ತಿ ಬಾಹುಬಲಿಯ ಪಾತ್ರ ವಹಿಸಿದ್ದಾರೆ. ಇಡೀ ಕುಟುಂಬ ಸುರಕ್ಷಿತವಾಗಿ ಪ್ರವಾಹದಿಂದ ಹೊರಬಂದಿದೆ.
You must log in to post a comment.