ಮೀನುಗಾರರ ಬಲೆಗೆ ಬಿತ್ತು 16 ಅಡಿ ಉದ್ದದ ‘ ಶಾಪಗ್ರಸ್ತ ಮೀನು’ | ಇದು ಭೂಕಂಪನದ ಸಂಕೇತವಂತೆ!!

ಸಾಗರ ಹಲವು ರಹಸ್ಯಗಳನ್ನು ಹೊಂದಿದೆ. ಈ ಸಾಗರದಲ್ಲಿ ಅಪರೂಪದ ಕೆಲವು ಜೀವಿಗಳು ಕಂಡುಬರುತ್ತವೆ. ಕೆಲವೊಮ್ಮೆ ಮೀನುಗಾರರ ಬಲೆಗೆ ಈ ಅಪರೂಪದ ಮೀನುಗಳು ಬೀಳುತ್ತವೆ. ಇದೀಗ ಚಿಲಿಯಲ್ಲಿ ವಿಚಿತ್ರವಾದ ದೈತ್ಯಾಕಾರದ ಮೀನು ಬಲೆಗೆ ಬಿದ್ದಿರುವ ಘಟನೆಯೊಂದು ಹೊರಬಿದ್ದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಇದೇ ಮೊದಲ ಬಾರಿಗೆ ದೊಡ್ಡ ಗಾತ್ರದ ಮೀನನ್ನು ನೋಡಿದ ಮೀನುಗಾರರೇ ಶಾಕ್​ ಆಗಿದ್ದಾರೆ. ಸದ್ಯ ಮೀನುಗಾರರು ನೀರಿನಿಂದ ಕ್ರೇನ್ ಮೂಲಕ ಮೇಲಕ್ಕೆತುವ ವಿಡಿಯೋ ವೈರಲ್ ಆಗುತ್ತಿದೆ. ಡೈಲಿ ಸ್ಟಾರ್ ಪ್ರಕಾರ, ಓರ್ಫಿಶ್ ಎಂದು ಗುರುತಿಸಲಾದ ಮೀನು ಐದು ಮೀಟರ್‌ಗಿಂತಲೂ ಹೆಚ್ಚು (16 ಅಡಿ) ಉದ್ದವನ್ನು ಹೊಂದಿದೆ. ಈ ದೈತ್ಯಾಕಾರದ ಮೀನು ಮೇಲಕ್ಕೆ ಬಂದರೆ ಅದು ಭೂಕಂಪನದ ಸಂಕೇತವಾಗಿದೆ ಎಂದು ನಂಬಲಾಗಿದೆ.

ಓರಾ ಮೀನುಗಳು ಆಳವಾದ ಸಮುದ್ರದಲ್ಲಿ ಮಾತ್ರ ಕಂಡುಬರುತ್ತವೆ. ಬಹಳ ಅಪರೂಪವಾಗಿ ಕೆಲವು ಕಡಲ ತೀರಗಳಲ್ಲಿ ಸತ್ತಂತೆ ಕಂಡುಬರುತ್ತವೆ. ಆದರೆ ಅವು ಜೀವಂತವಾಗಿರುತ್ತವೆ. ಸಮುದ್ರ ಮಟ್ಟಕ್ಕಿಂತ ಸುಮಾರು 1640 ಅಡಿ ಆಳದಲ್ಲಿ ವಾಸಿಸುತ್ತವೆ. ಇವು ಏಕೆ ಅಷ್ಟು ಆಳದಲ್ಲಿರುತ್ತವೆ ಎಂಬುದು ನಿಗೂಢವಾಗಿದೆ. ಕಡಲತೀರಕ್ಕೆ ಇವು  ಗಾಯಗೊಂಡು, ಇಲ್ಲ ಆಹಾರ ಅರಸಿ, ಇಲ್ಲಾ ಸಂತಾನೋತ್ಪತ್ತಿ  ಬಳಿಕ ಬರುತ್ತದೆ ಎಂದು ಹೇಳುತ್ತಾರೆ.

ಇಷ್ಟು ಆಳದಲ್ಲಿ ಜೀವಿಸುವ ಇವು ಸಮುದ್ರದ ಕಂಪನಕ್ಕೂ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಭೂಕಂಪ ಹಾಗೂ ಸುನಾಮಿಗಳನ್ನು ಇವುಗಳೇ ಸೃಷ್ಟಿಸುವಂತೆ ಮಾಡುತ್ತದೆ ಎಂದು ಇಲ್ಲಿನ ಜನರು ಹಿಂದಿನಿಂದಲೂ ನಂಬಿದ್ದಾರೆ ಆದರೆ ವಿಜ್ಞಾನದಿಂದ ಇದನ್ನೂ ದೃಢಪಡಿಸಲಾಗಿಲ್ಲ.

ದಿ ಮಿರರ್ ವರದಿಗಳ ಪ್ರಕಾರ, ಕೆಲವು ಮೀನುಗಾರರು ತಮ್ಮ ಹಡಗಿನಲ್ಲಿ ಚಿಲಿಯ ಅರಿಕಾದಲ್ಲಿನ ಸಮುದ್ರಕ್ಕೆ ಹೋಗಿದ್ದರು. ಇವರು ಮೀನುಗಳನ್ನು ಹಿಡಿದು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಹೀಗೆ ಸಮುದ್ರಕ್ಕಿಳಿಯುವ ಅವರು ನಿತ್ಯ ಮೀನುಗಳನ್ನು ಹಿಡಿಯುತ್ತಾರೆ. ಈ ವೇಳೆ ಬೃಹತ್ ಮೀನೊಂದು ಅವರ ಬಲೆಗೆ ಸಿಕ್ಕಿ ಬಿದ್ದಿದೆ. ಆರಂಭದಲ್ಲಿ ಜಾಕ್ ಪಾಟ್ ಸಿಕ್ಕಿದೆ ಎಂದುಕೊಂಡಿದ್ದ ಮೀನುಗಾರರು ಅದರೊಂದಿಗೆ ದಡ ಸೇರಿದಾಗ ಆತಂಕಗೊಂಡಿದ್ದಾರೆ. ದೈತ್ಯ ಮೀನನ್ನು ಶಾಪಗ್ರಸ್ತ ಮೀನು ಎಂದು ಕರೆಯಲಾಗುತ್ತಿದೆ.

ಮೀನುಗಾರರು ಬಲೆಗೆ ಸಿಕ್ಕ ಮೀನನ್ನು ದಡಕ್ಕೆ ಎಳೆದು ತಂದಿದ್ದಾರೆ. ಸಿಕ್ಕಿ ಮೀನಿನಿಂದ ತಮ್ಮ ಆರ್ಥಿಕ ಸಂಕಷ್ಟ ದೂರವಾಯ್ತು ಎಂದು ಮೀನುಗಾರರು ಅಂದುಕೊಂಡಿದ್ದರು. ಬಲೆ ಭಾರದಿಂದ ಸಂತೋಷಗೊಂಡಿದ್ದ ಮೀನುಗಾರರು ದಡಕ್ಕೆ ಬಂದಾಗ ಭಯಭೀತರಾಗಿದ್ದಾರೆ. ಯಾಕೆಂದರೆ ಮೀನು ನಿರೀಕ್ಷೆಗೂ ಮೀರಿ ದೈತ್ಯವಾಗಿರುವುದು ಕಂಡುಬಂದಿದೆ.

ಭವಿಷ್ಯ ನುಡಿದ ಜನ
ಮೀನು ಭವಿಷ್ಯವನ್ನು ಹೇಳುತ್ತದೆ ಎಂದು ಕೆಲವರು ಹೇಳುತ್ತಾರೆ. ನೀವು ಇದನ್ನು ಕರಾವಳಿಯ ಭಾಗದಲ್ಲಿ ನೋಡಿದರೆ, ಆ ಪ್ರದೇಶದಲ್ಲಿ ಅನಾಹುತ ಸಂಭವಿಸಲಿದೆ ಎಂದು ಅರ್ಥ ಎಂದು ಕೆಲವರು ಭವಿಷ್ಯ ನುಡಿದಿದ್ದಾರೆ. 2011 ರಲ್ಲಿ, ಈ ಮೀನು ಜಪಾನ್‌ನಲ್ಲಿ ಕಾಣಿಸಿಕೊಂಡಿತು. ನಂತರ ಫುಕುಶಿಮಾದಲ್ಲಿ ತೀವ್ರ ಭೂಕಂಪ ಸಂಭವಿಸಿತು. ಇಂತಹ ಇನ್ನೂ ಅನೇಕ ಘಟನೆಗಳು ನಡೆದಿವೆ. ಈ ಕಾರಣದಿಂದಾಗಿ ಶಾಪಗ್ರಸ್ತವೆಂದು ಪರಿಗಣಿಸಲಾಗಿದೆ.

error: Content is protected !!
Scroll to Top
%d bloggers like this: