ನೀರಿನಲ್ಲೇ ನಿದ್ದೆಗೆ ಜಾರಿದ ಕೋಳಿ | ನಗುಉಕ್ಕಿಸುವ ದೃಶ್ಯದ ವೀಡಿಯೋ ವೈರಲ್

ಎಲ್ಲರೂ ಮನುಷ್ಯ ನಿದ್ದೆ ಮಾಡುವ ಪರಿ ನೋಡಿರಬಹುದು. ಹೆಚ್ಚೆಂದರೆ ಪ್ರಾಣಿಗಳು ನಿದ್ರಿಸುವ ರೀತಿ ಅಲ್ವಾ! ಹಾಗೆನೇ ಕೋಳಿ ಕೂಡಾ…ಆದರೆ ನಾರ್ಮಲಾಗಿ ಕೋಳಿ ಮಲಗೋ ರೀತಿ ಎಲ್ಲರೂ ನೋಡಿರಬಹುದು. ಆದರೆ ನಾವು ಇಲ್ಲಿ ತೋರಿಸೋ ಕೋಳಿಯೊಂದು ಮಲಗೋ ರೀತಿ ಕಂಡರೆ ನೀವು ಬಿದ್ದು ಬಿದ್ದು ನಗ್ತೀರ…

 

ಈ ವೀಡಿಯೋ ನೋಡಿದಾಗ, ನಿಮಗೆ ತಕ್ಷಣ ಇದು ನೀರಿನಲ್ಲಿ ತೇಲುವ ಕೋಳಿ ಎಂಬಂತೆ ಕಾಣುತ್ತದೆ. ಆದರೆ ಒಂದು ಕ್ಷಣ ಸತ್ತಂತೆಯೇ ಕಾಣುವ ಈ ಕೋಳಿಯ ಕಾಲುಗಳು ಮೇಲೆ ಇರುವ ಸ್ಥಿತಿಯಲ್ಲಿ ತೇಲುತ್ತಿರುವುದನ್ನು ಕಂಡಾಗ ಯಾರಿಗಾದರೂ ಗೊಂದಲವಾಗದೇ ಇರದು…ನಿಮಗೆ ತಕ್ಷಣಕ್ಕೆ ಕೋಳಿಯಲ್ಲಿ ಚಲನೆ ಕಾಣಿಸುವುದೇ ಇಲ್ಲ…! ಆದರೆ, ನಂತರ ಕಾಣಸಿಗುವ ದೃಶ್ಯ ಮಾತ್ರ ನಮ್ಮಲ್ಲಿ ನಗುವುಕ್ಕುವಂತೆ ಮಾಡುವುದಂತೂ ನಿಜ.

ಈ ಕೋಳಿ ನಟನೆಯನ್ನು ಕಲಿತಿದೆಯಾ ಅಥವಾ ಅಪಾಯ ಎದುರಾದಾಗ ಪಾರಾಗಲು ಈ ರೀತಿಯ ಜಾಣತನ ತೋರಿಸುತ್ತದೆಯಾ? ಎಂಬ ಅನುಮಾನ ನಮಗೆ ಖಂಡಿತ ಮೂಡುತ್ತೆ. ಅಪಾಯ ಎದುರಾದಾಗ ಪಾರಾಗಲು ಜಾಣತನದಿಂದ ಕೋಳಿ ಸೇರಿದಂತೆ ಪಕ್ಷಿ, ಪ್ರಾಣಿಗಳು ಸತ್ತಂತೆ ನಟಿಸುವ ಸಾಕಷ್ಟು ಉದಾಹರಣೆಗಳೂ ಇವೆ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳು ಕಾಣಸಿಗುತ್ತವೆ. ಇದೀಗ ಅಂತಹದ್ದೇ ಒಂದು ದೃಶ್ಯ ವೈರಲ್ ಆಗುತ್ತಿದೆ.

@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ನೀರು ತುಂಬಿದ ಪಾತ್ರೆಯಲ್ಲಿ ಕೋಳಿಯೊಂದು ಕಾಲು ಮೇಲಾದ ಸ್ಥಿತಿಯಲ್ಲಿ ತೇಲುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಒಮ್ಮೆಲೆ ನೋಡಿದಾಗ ಈ ಕೋಳಿ ಸತ್ತಂತೆ ಕಾಣುತ್ತದೆ. ಆವಾಗ ಅಲ್ಲಿಗೆ ಬರುವ ಒಬ್ಬರು ತೇಲುತ್ತಿದ್ದ ಈ ಕೋಳಿಯ ಮೇಲೆ ನೀರು ಚಿಮುಕಿಸುತ್ತಾರೆ. ಆದರೆ, ಆಗಲೂ ಸ್ವಲ್ಪ ಹೊತ್ತು ಈ ಕೋಳಿಯಲ್ಲಿ ಯಾವುದೇ ಚಲನೆ ಕಾಣುವುದಿಲ್ಲ. ಇದಾದ ಬಳಿಕ ಸ್ವಲ್ಪ ಕ್ಷಣದ ನಂತರ ಅತ್ತಿಂದಿತ್ತ ನೋಡುವ ಕೋಳಿ ನೀರಿನಿಂದ ಎದ್ದು ಹೊರಗೆ ಬಂದು ಪಾತ್ರೆಯಲ್ಲಿ ನಿಂತುಕೊಳ್ಳುತ್ತದೆ…! ಈ ಕೋಳಿ ಇಷ್ಟು ಹೊತ್ತು ಸ್ತಬ್ಧವಾಗಿದ್ದ ಪರಿ ಖಂಡಿತಾ ಅಚ್ಚರಿ ಮೂಡಿಸುವಂತಿದೆ. `ಜಸ್ಟ್ ಸ್ಲೀಪಿಂಗ್’ ಎಂಬ ಕ್ಯಾಪ್ಶನ್‌ನೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.

ಸಹಜವಾಗಿಯೇ ಈ ವೀಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಆಸಕ್ತಿಯಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಈ ಕೋಳಿಯ ಈ ನಾಟಕೀಯ ನಡೆ ಎಲ್ಲರ ಮುಖದಲ್ಲಿ ಮಂದಹಾಸ ಬೀರುವುದರಲ್ಲಿ ಎರಡು ಮಾತಿಲ್ಲ.

https://twitter.com/buitengebieden/status/1547646616303050761?ref_src=twsrc%5Etfw%7Ctwcamp%5Etweetembed%7Ctwterm%5E1547646616303050761%7Ctwgr%5E%7Ctwcon%5Es1_c10&ref_url=https%3A%2F%2Fd-26181096642500072145.ampproject.net%2F2206221455000%2Fframe.html

Leave A Reply

Your email address will not be published.