ಮಂಗಳೂರು : ಲೊಕೇಶನ್, ವಾಟ್ಸಪ್ ಸಂದೇಶ ಕಳಿಸಿ ಆತ್ಮಹತ್ಯೆ ಮಾಡುತ್ತೇನೆಂದ ಅಬಕಾರಿ ಡಿವೈಎಸ್ಪಿ ಅಳಿಯ !

ಮಂಗಳೂರು : ಯುವಕನೋರ್ವ ಸೇತುವೆ ಮೇಲೆ ಬೈಕ್ ನಿಲ್ಲಿಸಿ ಪಾವಂಜೆ ನಂದಿನಿ ನದಿಗೆ ಹಾರಿದ್ದಾನೆ ಎಂಬ ಘಟನೆಯೊಂದು ಮಂಗಳವಾರ ರಾತ್ರಿ ನಡೆದಿದೆ.

 

ಯುವಕ ನದಿಗೆ ಹಾರುವ ಮೊದಲು ತನ್ನ ಸಂಬಂಧಿಕರಿಗೆ, ತನ್ನ ಮಿತ್ರರಿಗೆ, ವಾಟ್ಸಪ್ ನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಜಾಗದ ಲೊಕೇಶನ್ ಶೇರ್ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೇ, ಸೂಸೈಡ್ ಮಾಡಿಕೊಳ್ಳುವ ವಿಚಾರದ ಬಗ್ಗೆ ಕೂಡ ವಾಟ್ಸಪ್ ನಲ್ಲಿ ಸಂದೇಶವನ್ನು ಕಳಿಸಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕ ರಾಕೇಶ್ ಗೌಡ ಎಂದು ತಿಳಿದು ಬಂದಿದೆ. ಈತ ಅಬಕಾರಿ ಡಿವೈಎಸ್ಪಿಯವರ ಅಳಿಯ ಎಂದು ತಿಳಿದಿದೆ. ಈತ ತನ್ನ ಮೊಬೈಲ್ ಹಾಗೂ ತನ್ನಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಬೈಕ್‌ ನಲ್ಲಿ ಇಟ್ಟು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ.

ಮಂಡ್ಯ ಮೂಲದ ವ್ಯಕ್ತಿಯಾಗಿರುವ ಈತ, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದು, ಮಂಗಳೂರಿನ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ. ರಾಕೇಶ್ ಗೌಡ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಎಂಬುದು ಇನ್ನು ತಿಳಿದು ಬಂದಿಲ್ಲ.

ಮೊಬೈಲ್ ವಾಟ್ಸಪ್ ಮೂಲಕ ಸಂದೇಶ ರವಾನೆ ಮಾಡಿದ್ದು, ಇತನೇ ಮೆಸೇಜ್ ಮಾಡಿದ್ದಾನೆಯೇ ಅಥವಾ ಬೇರೆ ಯಾರಾದರೂ ಮಾಡಿದ್ದಾರೆಯೇ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave A Reply

Your email address will not be published.