ಫಿಕ್ಸ್ ಆಯ್ತಾ ಕೆ ಎಲ್ ರಾಹುಲ್- ಆಥಿಯಾ ಶೆಟ್ಟಿ ಮದುವೆ! ಶೀಘ್ರದಲ್ಲೇ ಶುಭ ಸುದ್ದಿ, ಇನ್ನೇನಿದ್ದರೂ ಪೆಪೆಪೇ ಡುಂಡುಂಡುಂ!

ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ಮೋಸ್ಟ್ ಎಲಿಜಬಲ್ ಬ್ಯಾಚುಲರ್, ಐಪಿಎಲ್‌ನ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಮದುವೆಯಾಗಲು ಸಜ್ಜಾಗಿದ್ದಾರೆ.

 

ಹುಡುಗಿ ಯಾರು ಅಂತ ಈಗಾಗಲೇ ಎಲ್ಲರಿಗೂ ತಿಳಿದಿದೆ. ಗೊತ್ತಾಗಿದೆ. ಅವರು ಬೇರೆ ಯಾರೂ ಅಲ್ಲ ಬಾಲಿವುಡ್‌ನ ಶೆಟ್ಟಿಯವರ ಪುತ್ರಿ ಅಥಿಯಾ ಶೆಟ್ಟಿ ಇದೀಗ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಡಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಒಬ್ಬರಿಗೊಬ್ಬರು ಮೂರು ವರ್ಷದಿಂದ ಪ್ರೀತಿಸುತ್ತಾ ಇದ್ದಾರೆ. ಅವರಿಬ್ಬರು ಆಗ ಮದುವೆಯಾಗ್ತಾರಂತೆ. ಈಗ ಮದುವೆಯಾಗ್ತಾರಂತೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತಿತ್ತು.

ಇದೀಗ ಈ ಜೋಡಿಯ ಮದುವೆ ಕುರಿತಾದ ಹಾಟ್ ಹಾಟ್ ಸುದ್ದಿಯೊಂದು ಈಗ ಹೊರಬಿದ್ದಿದೆ. ಈ ಜೋಡಿ ಶೀಘ್ರವೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ ಮದುವೆಗೆ ಮುಹೂರ್ತವೂ ಕೂಡಿ ಬಂದಿದೆ ಅಂತ ಹೇಳಲಾಗುತ್ತಿದೆ.

ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎನ್ನಲಾಗಿದೆ. ರಾಹುಲ್ ಅವರ ಪೋಷಕರು ಇತ್ತೀಚೆಗೆ ಅಥಿಯಾ ಅವರ ಕುಟುಂಬವನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮದುವೆ ಹಾಗೂ ಅದರ ಪ್ರತಿಯೊಂದು ಕಾರ್ಯಕ್ರಮಗಳನ್ನು ಅಥಿಯಾ ಶೆಟ್ಟಿಯವರೇ ಮುಂದೆ ನಿಂತು ನೋಡಿಕೊಳ್ಳುತ್ತಿದ್ದಾರೆ. ವಿವಾಹ ಕಾರ್ಯ ಮುಂಬೈನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ

Leave A Reply

Your email address will not be published.