ಕಳಸ:ತೋಟದ ಕೆಲಸದಲ್ಲಿದ್ದ ಯುವತಿಯ ಮೇಲೆ ಮುರಿದು ಬಿದ್ದ ಮರ!!

ಚಿಕ್ಕಮಗಳೂರು: ಗಾಳಿ ಮಳೆಯ ನಡುವೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಮರ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನಲ್ಲಿ ನಡೆದಿದೆ.

ಮೃತ ಯುವತಿಯನ್ನು ಪ್ರಿಯಾಂಕ(22)ಎಂದು ಗುರುತಿಸಲಾಗಿದ್ದು,ಈಕೆ ಗ್ರಾಮದಲ್ಲೇ ಇರುವ ಕಾಫಿ ತೋಟವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.

ಎಂದಿನಂತೆ ಘಟನೆ ನಡೆದ ದಿನವೂ ತೋಟಕ್ಕೆ ಕೆಲಸಕ್ಕೆ ತೆರಳಿದ್ದು,ಭೀಕರ ಮಳೆಯ ನಡುವೆ ಬಿರುಸಾದ ಗಾಳಿಗೆ ಮರವೊಂದು ಮುರಿದು ಆಕೆಯ ಮೇಲೆಯೇ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

Leave A Reply

Your email address will not be published.