ಉಡುಪಿ:ಮೇಲ್ಸೇತುವೆಯಿಂದ ಕೆಳಕ್ಕೆ ಹಾರಿದ ಕಾರಿನಡಿಗೆ ಬಿದ್ದ ಬೈಕ್ ಸವಾರ ಸಾವು!!

ಉಡುಪಿ : ನಗರದ ಕರವಾಳಿ ಬೈಪಾಸ್ ಮೇಲ್ ಸೇತುವೆಯಲ್ಲಿ ಕಾರೊಂದು ಮೇಲಿನಿಂದ ಕೆಳಗೆ ಬೈಕ್ ನ ಮೇಲೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಸಾವನ್ನಪ್ಪಿದ ಯುವಕ ಬಾಗಲಕೋಟೆಯ ಮೂಲದ ಸುನೀಲ್ ಕುಮಾರ್ (24) ಎಂದು ತಿಳಿದು ಬಂದಿದೆ.

ಕಾರಿನಲ್ಲಿ ಮಂಗಳೂರಿನ ತಾಯಿ ಮತ್ತು ಮಗ ಪ್ರಯಾಣಿಸುತ್ತಿದ್ದರು.ರಾಷ್ಟ್ರೀಯ ಹೆದ್ದಾರಿ ಉಡುಪಿಯ ಕರವಾಳಿ ಬೈಪಾಸ್ ನಲ್ಲಿ ಕಾರು ಮೇಲ್ ಸೇತುವೆಯಲ್ಲಿ ಮಂಗಳೂರಿನತ್ತ ಪ್ರಯಾಣಿಸುತಿತ್ತು.ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆಳಗೆ ರಸ್ತೆಗೆ ಬಿದ್ದಿದೆ.ಕೆಳ ರಸ್ತೆಯಲ್ಲಿ ಬೈಕ್ ಸವಾರನ ಮೈಮೇಲೆ ಬಿದ್ದು,ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಕಾರಿನಲ್ಲಿದ್ದ ಮಹಿಳೆ ಮತ್ತು ಅವರ ಮಗನಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply