ಇನ್ನೇನು ವರ ಹಾರ ಹಾಕಬೇಕು ಅನ್ನುವಷ್ಟರಲ್ಲಿ ಜೋಡಿಯ ನಡುವೆ ನುಸುಳಿದ ಪ್ರಿಯಕರ, ಮುಂದೆ ಆಗಿದ್ದು!?

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರವಾದ ಘಟ್ಟ. ಹೀಗಾಗಿ ಒಂದೊಂದು ಹೆಜ್ಜೆಯೂ ನೂರು ಜನ್ಮಗಳವರೆಗೆ ನೆನಪಿಸಿಕೊಳ್ಳುವಂತಹ ದೃಶ್ಯ. ಪ್ರತೀ ಹುಡುಗ-ಹುಡುಗಿಗೂ ತನ್ನ ಸಂಗಾತಿ ಹೀಗೆ ಇರಬೇಕು, ಹಾಗೆ ಇರಬೇಕು ಎಂದು ಯೋಚಿಸಿರುತ್ತಾರೆ. ಹೀಗಾಗಿ, ಮೊದಲೇ ಮೊದಲೇ ತನ್ನ ಜೋಡಿಯನ್ನು ಹುಡುಕಿ ಇಡುತ್ತಾರೆ. ಆದ್ರೆ, ಮದುವೆ ಎಂಬುದು ಭಗವಂತನ ಸೃಷ್ಟಿ ಎಂದೇ ಹೇಳಬಹುದು. ಯಾಕಂದ್ರೆ ಯಾರಿಗೆ ಯಾರು ಎಂದು ಆತನೇ ಸೃಷ್ಟಿಸಿರುತ್ತಾನೆ.


Ad Widget

Ad Widget

ಹೌದು. ನಾವು ನೀವೂ ನೋಡಿದ ಪ್ರಕಾರ ಅದೆಷ್ಟೋ ಮದುವೆಗಳು ಮುರಿದು ಬಿದ್ದಿರುವಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇಂತಹ ಮದುವೆಗಳಲ್ಲಿ ಪ್ರೇಮ ವಿವಾಹವೇ ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು. ಇದೀಗ ಇಲ್ಲೊಂದು ಕಡೆ ಅಂತಹುದೇ ಘತನೆ ನಡೆದಿದ್ದು, ಇನ್ನೇನು ಹಾರ ಬದಲಾಯಿಸಬೇಕು ಅನ್ನುವಷ್ಟರಲ್ಲಿ, ನಡುವೆ ಎಂಟ್ರಿ ಕೊಟ್ಟಿದ್ದಾನೆ ಪ್ರಿಯಕರ.


Ad Widget

ಅರೇ, ಇದೇನು, ಆಕೆ ಪ್ರಿಯಕರನ ಜೊತೆಗೆಯೇ ಮದುವೆ ಆಗಿಲ್ಲವೇ ಅಂದುಕೊಂಡಿದ್ದೀರಾ?.. ಇಲ್ಲ. ಅಲ್ಲಿ ನಡೆದಿದ್ದೇ ಬೇರೆ. ಬಿಹಾರದ ನಳಂದಾದಲ್ಲಿ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಷಯ ಹುಡುಗಿಯ ಮನೆಯವರ ಕಿವಿಗೆ ಬೀಳುತ್ತಿದ್ದಂತೆಯೇ, ಪೋಷಕರು ಅವರ ಪ್ರೀತಿಗೆ ಅಡ್ಡಿಯಾಗಿದ್ದಾರೆ. ಬೇರೊಂದು ಕಡೆ ಸಂಬಂಧ ಗೊತ್ತು ಮಾಡಿ, ಮದುವೆ ಕೂಡಾ ನಿಶ್ಚಯ ಮಾಡಿದ್ದಾರೆ

ಹುಡುಗಿಯೇನೋ ಬೇರೊಂದು ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಆದ್ರೆ ತಾನು ಪ್ರೀತಿಸಿದ ಹುಡುಗಿ ಇನ್ನೊಬ್ಬನ ಕೈ ಹಿಡಿಯುತ್ತಾಳೆ ಅಂದ್ರೆ ಪ್ರಿಯಕರ ಸಹಿಸುತ್ತಾನೆಯೇ.. ಇಲ್ಲ. ಅದೇ ರೀತಿ ಮದುವೆ ದಿನ ಮದುವೆ ಶಾಸ್ತ್ರಗಳು ನಡೆಯುತ್ತಿರುತ್ತದೆ. ಇನ್ನೇನು ವಧು ವರ ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿ ವೇದಿಕೆಯ ಮೇಲೆ ಹುಡುಗಿಯ ಪ್ರೇಮಿ ಕಾಣಿಸಿಕೊಳ್ಳುತ್ತಾನೆ. ವರನಿಗೆ ಅಡ್ಡಲಾಗಿ ಬಂದು ವಧುವಿನ ಕೊರಳಿಗೆ ಹಾರ ಹಾಕುತ್ತಾನೆ. ಮಾತ್ರವಲ್ಲ ಹಣೆಗೆ ಸಿಂಧೂರ ಕೂಡಾ ಹಚ್ಚುತ್ತಾನೆ.

Ad Widget

Ad Widget

Ad Widget

ವರ, ವರನ ಮನೆಯವರು, ವಧುವಿನ ಮನೆಯವರು ಎಲ್ಲಾ ಸೇರಿದ್ದ ಜಾಗಕ್ಕೆ ಬಂದು ಆ ಪ್ರೇಮಿ ಈ ರೀತಿ ಮಾಡಿ ಬಿಟ್ಟಿದ್ದಾನೆ. ಸುಮ್ಮನಿರದ ಮನೆಯವರು ಆ ಪ್ರೇಮಿಗೆ ವೇದಿಕೆಯ ಮೇಲೆಯೇ ಕಪಾಳ ಮೋಕ್ಷ ಮಾಡಿ, ಎರಡೂ ಕಡೆಯವರು ಸೇರಿ ಪ್ರೇಮಿಗೆ ಸರಿಯಾಗಿ ಬಡಿದಿದ್ದಾರೆ. ಇದೀಗ ಹುಚ್ಚು ಪ್ರೀತಿಗೆ ಬಲಿಯಾದ ಯುವಕ ತೀವ್ರವಾಗಿ ಗಾಯಗೊಂಡ ಪ್ರೇಮಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ, ಮದುವೆ ಮುಂದುವರಿಸಲು ವರನ ಮನವೊಲಿಸಲು ಪ್ರಯತ್ನಿಸಿದರೂ, ವರ ಮಾತ್ರ ಇದಕ್ಕೆ ಒಪ್ಪಲಿಲ್ಲ. ಒಟ್ಟಿನಲ್ಲಿ ಮದುವೆ ಮುರಿದು ಬಿದ್ದಿದೆ.

error: Content is protected !!
Scroll to Top
%d bloggers like this: