ಬಕ್ರೀದ್ ಪ್ರಯುಕ್ತ ಮದ್ಯ ಮಾರಾಟ ನಿಷೇಧಗೊಂಡ ಈ ಊರುಗಳಲ್ಲಿ ನಿಮ್ಮೂರು ಕೂಡಾ ಉಂಟಾ ನೋಡ್ಕೊಳ್ಳಿ
ಬಾಗಲಕೋಟೆ: ಜಿಲ್ಲೆಯಾದ್ಯಂತ ಜುಲೈ ರಂದು ಆಚರಿಸಲ್ಪಡುವ ಬಕ್ರೀದ್ ಹಬ್ಬದ ನಿಮಿತ್ಯ ಕಾನೂನು ಸುವ್ಯವಸ್ಥೆ ಹಿತ ದೃಷ್ಠಿಯಿಂದ ಕೆ.ಎಸ್.ಬಿ.ಸಿಎಲ್ ಮದ್ಯದ ಘಟಕ ಹೊರತುಪಡಿಸಿ ಬೀರ, ಬ್ರ್ಯಾಂಡಿ, ಲಿಕ್ಕರ್ ಮಾರಾಟ ಹಾಗೂ ಮದ್ಯಪಾನ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ದಂಡಾಧಿಕಾರಿ ಪಿ.ಸುನೀಲ್ಕುಮಾರ ಆದೇಶ ಹೊರಡಿಸಿದ್ದಾರೆ.
ಬಾಗಲಕೋಟೆ ಶಹರ, ನವನಗರ, ಕಲಾದಗಿ ಹಾಗೂ ತಾಲೂಕಾ ಗ್ರಾಮೀಣ ವ್ಯಾಪ್ತಿಯಲ್ಲಿ ಜುಲೈ 9ರ ಬೆ.6 ರಿಂದ ಜುಲೈ 11ರ ಬೆ.6 ವರೆಗೆ ಮದ್ಯ ಇರಲ್ಲ.
ಹುನಗುಂದ ತಾಲೂಕು ಜುಲೈ 9ರ ಬೆ.6 ರಿಂದ ಜುಲೈ 11ರ ಬೆ.6 ವರೆಗೆ, ಬಾದಾಮಿ ಜುಲೈ 9ರ ಬೆ.6 ರಿಂದ ಜುಲೈ 10ರ ಬೆ.6 ವರೆಗೆ, ಬೀಳಗಿ, ಜಮಖಂಡಿ, ಮುಧೋಳ, ಇಲಕಲ್ಲ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಜುಲೈ 9ರ ಬೆ.6 ರಿಂದ ಜುಲೈ 11ರ ಬೆ.6 ವರೆಗೆ ಹಾಗೂ ಗುಳೇದಗುಡ್ಡ ತಾಲೂಕಿನಲ್ಲಿ ಜುಲೈ 10ರ ಬೆ.6 ಗಂಟೆಯಿಂದ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ಹಾಗೂ ಮದ್ಯಪಾನ ಮಾಡುವುದನ್ನು ನಿಷೇಧಿಸಿ ಆದೇಶಿಸಿದ್ದಾರೆ.