ಮಂಗಳೂರು : ನವಜಾತ ಶಿಶುವಿನಲ್ಲಿ ಹಲ್ಲು !

ಮಂಗಳೂರು : ನವಜಾತ ಶಿಶುಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಆದರೆ ಮಂಗಳೂರಿನಲ್ಲಿ ಹುಟ್ಟಿದ ಈ ಶಿಶುವೊಂದರ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದೆ.

ಕಾಸರಗೋಡಿನ ಮಂಜೇಶ್ವರ ಮೂಲದ ದಂಪತಿಯ ಈ ಶಿಶು ಎಲ್ಲರ ಅಚ್ಚರಿಗೆ ಕಾರಣವಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೀಯಪದವಿನ ರಾಜೇಶ್ ಹಾಗೂ ಧನ್ಯಾ ದಂಪತಿಗೆ ಜು. 4ರಂದು ಕುಂಬಳೆಯ ಆಸ್ಪತ್ರೆಯಲ್ಲಿ ಹೆಣ್ಣು ಶಿಶು ಜನಿಸಿತ್ತು. ಆದರೆ ಹುಟ್ಟಿದ ಮಗುವಿನ ಬಾಯಿಯಲ್ಲಿ ಎರಡು ಹಲ್ಲು ಕಾಣಿಸಿಕೊಂಡಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಹಾಗೂ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ಅದರಂತೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಡಾ| ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿ ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ.

ಈ ಬಗ್ಗೆ ಡಾ.ಮುರಳೀ ಮೋಹನ್ ಚೂಂತಾರು ಪ್ರತಿಕ್ರಿಯೆ ನೀಡಿ, ನವಜಾತ ಶಿಶುವಿನ ಬಾಯಿಯಲ್ಲಿ ಹಲ್ಲು ಇರುವುದು ಅತಿವಿರಳ. ಒಂದು ವೇಳೆ ಇದ್ದರೂ ಅದು ಮೃದುವಾಗಿರುತ್ತದೆ. ಈ ಹಲ್ಲು ತಾಯಿ ಹಾಲುಣಿಸುವ ಸಂದರ್ಭ ತುಂಡಾಗಿ ಗಂಟಲಿನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಆದರೆ ಇದೀಗ ಜನಿಸಿರುವ ಶಿಶುವಿನ ಹಲ್ಲು ಗಟ್ಟಿಯಿದ್ದು, ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇಲ್ಲ ಎಂದಿದ್ದಾರೆ.

error: Content is protected !!
Scroll to Top
%d bloggers like this: