SHOCKING NEWS | ಮಹಿಳೆಯ ಪ್ರಾಣವನ್ನೇ ಹಿಂಡಿ ತೆಗೆದ ಬುರ್ಕಾ !

Share the Article

ಕೋಲಾರ: ಸಾವು ಎಂದು ಹೇಗೆ ಬರಬಹುದು ಎಂಬುದನ್ನು ಹೇಳಲೇ ಸಾಧ್ಯವಿಲ್ಲ. ಅದೆಷ್ಟೇ ಮುಂಜಾಗ್ರತೆ ಕೈಗೊಂಡರು ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿಯಂತಿದೆ ಈ ಘಟನೆ. ಬುರ್ಕಾ ಒಂದು ಮಹಿಳೆಯ ಜೀವ ಹಿಂಡಿದೆ. ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಮಹಿಳೆಯ ಬುರ್ಕಾ ಸಿಲುಕಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೌಸರ್ ಬೇಗ್(37) ಮೃತ ಮಹಿಳೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯ 3ನೇ ಅಡ್ಡ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ಕೌಸರ್ ಬೇಗ್ ಮಂಗಳವಾರ ಮುಂಜಾನೆ ತಮ್ಮದೆ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಗೆ ಬಂದಿದ್ದಳು.

ಈ ವೇಳೆ ಕೌಸರ್ ಬೇಗ್ ಧರಿಸಿದ್ದ ಬುರ್ಕಾ, ಕಬ್ಬಿನ ಯಂತ್ರಕ್ಕೆ ಸಿಲುಕಿದ್ದು, ಅದನ್ನು ತೆಗೆಯಲಾಗದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬುರ್ಕಾದೊಂದಿಗೆ ದೇಹವನ್ನು ಕೂಡ ಯಂತ್ರ ಎಳೆದುಕೊಂಡಿದ್ದರಿಂದ ಮಹಿಳೆಯ ಪ್ರಾಣವೇ ಹೋಗಿದೆ. ಜೆಯೂಸಿನ ಜತೆ ರಕ್ತ ಹರಿದಿದ್ದು, ಚಲಿಸುವ ಮೆಷಿನ್ ನ ಜತೆ ಶಾಲು ಅಥವಾ ಉದ್ದನೆಯ ಬಟ್ಟೆ ಧರಿಸಿದ ಮಹಿಳೆಯ ಜೀವ ಹೋಗಿದೆ. ಸ್ಥಳಕ್ಕೆ ರಾಬರ್ಟ್‍ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave A Reply