ವಿವಾದದ ಬಳಿಕ ತೆಲುಗಿನಲ್ಲಿ ತಾಯಿ ಪಾತ್ರದಿಂದ ಪವಿತ್ರಾ ಲೋಕೇಶ್ ಔಟ್ ? | ಕಾರಣ ‘ ಪರಿಶುದ್ಧತೆ ‘ ಫ್ಯಾಕ್ಟರ್ !!

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ವಿವಾಹ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮೊದಲು ಈ ಜೋಡಿ ಗುಟ್ಟಾಗಿ ಮದುವೆಯಾಗಿದೆ ಎನ್ನುವ ವದಂತಿಗಳು ಹಬ್ಬಿದರೆ, ನಂತರ ಈ ಜೋಡಿ ಮದುವೆ ಆಗುತ್ತೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೆ ಈ ವಿವಾದ ಜೋರಾಗಿ ಸದ್ದು ಮಾಡುತ್ತಲೇ, ನಾವು ಬೆಸ್ಟ್ ಫ್ರೆಂಡ್ಸ್ ಎಂದು ಸಂದರ್ಶನದಲ್ಲಿ ಹೇಳಿಕೊಂಡರು. ಆದರೆ ಅದರ ಬೆನ್ನಲ್ಲೇ ಅವರಿಬ್ಬರೂ ಒಂದೇ ರೂಮಿನಲ್ಲಿ ರಾತ್ರಿ ಕಳೆದು ನರೇಶ್ ಪತ್ನಿ ಮತ್ತು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದರು.

ಪವಿತ್ರಾ ಈ ಹಿಂದೆ ಕಾಸ್ಟಿಂಗ್ ಕೋಚ್ ಇಲ್ಲ ಎಂದ ಬಗ್ಗೆ, ಮತ್ತು ಕೆಲವರು ಹಣಕ್ಕಾಗಿ ಇದನ್ನೆಲ್ಲ ಹೇಳುತ್ತಿದ್ದಾರೆ ಎಂದು ಶ್ರೀ ರೆಡ್ಡಿಗೆ ಕಾಮೆಂಟ್ ಮಾಡಿದ್ದರು. ಅಲ್ಲದೆ ನರೇಶ್ ಅವತ್ತು ಶ್ರೀ ರೆಡ್ಡಿ ಪ್ರತಿಭಟಿಸಿದ ಸ್ಥಳಕ್ಕೆ ಆಸಿಡ್ ಹಾಕಿ ತೊಳಿಬೇಕು ಅಂದಿದ್ದರು. ಈಗ ಇಬ್ಬರೂ ಒಂದೇ ಕಡೆ ಸಿಕ್ಕಿದ್ದಾರೆ ಶ್ರೀ ರೆಡ್ಡಿಗೆ. ‘ ಅಪವಿತ್ರಾ ಲೋಕೇಶ್ ‘ ಎಮಂಡಿ, ನಾಕು ನೀವು ಡಬ್ಬುಲು… “;ಹೀಗೆ ತೆಲುಗಿನಲ್ಲಿ ವೀಡಿಯೋ ಮಾಡಿ ಜನ್ಮ ಜಾಲಾಡಿಸಿದ್ದಾರೆ. ಆದುದರಿಂದ ತೆಲುಗಿನಲ್ಲಿ ಆಕೆ ಅಮ್ಮನಾಗಿ ಗಳಿಸಿದ್ದ ಜನಪ್ರಿಯತೆ ಜರ್ರನೆ ಇಳಿದು ಹೋಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೀಗೆ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣಕ್ಕೆ ನಟಿ ಪವಿತ್ರಾ ಲೋಕೇಶ್ ಅವರು ತಮ್ಮ ಸಿನಿಮಾ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಯಾವ ಸಿನಿಮಾದಿಂದ ಪವಿತ್ರಾ ಲೋಕೇಶ್ ಅವರನ್ನು 3 ದೊಡ್ದ ಪ್ರೊಜೆಕ್ಟ್ ಗಳಿಂದ ಕೈಬಿಡಲಾಗಿದೆ ಎನ್ನಲಾಗಿದೆ.

ನರೇಶ್ ತೆಲುಗಿನ ದೊಡ್ಡ ನಟ ಹಾಗೂ ದೊಡ್ಡ ಸ್ಟಾರ್ ನಟರ ಕುಟುಂಬದವರಾದ ಕಾರಣ ತೆಲುಗು ಚಿತ್ರರಂಗದಲ್ಲಿ ವಿವಾದ ಭುಗಿಲೆದ್ದಿದೆ. ಈ ವಿವಾದದ ಬೆನ್ನಲ್ಲೇ ನಟಿ ಪವಿತ್ರಾ ಲೋಕೇಶ್ ಅವರ ಬಗ್ಗೆ ಮತ್ತೊಂದು ಗಾಸಿಪ್ ಹಬ್ಬಿದೆ. ಅದೇನೆಂದರೆ ತೆಲುಗು ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಅವರನ್ನು ತೆಗೆದು ಹಾಕಲಾಗುತ್ತಿದೆ ಎನ್ನುವ ವದಂತಿ ಹಬ್ಬಿದೆ. ಈಗಾಗಲೇ ಅವರು ಒಪ್ಪಿಕೊಂಡಿರುವ ಎರಡು ದೊಡ್ಡ ತೆಲುಗು ಸಿನಿಮಾಗಳಿಂದ ಪವಿತ್ರಾ ಲೋಕೇಶ್ ಅವರನ್ನು ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ನಿಜ, ಹೀಗೊಂದು ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ. ಈಗಾಗಲೇ ಪವಿತ್ರಾ ಲೋಕೇಶ್ ಅವರು ಒಪ್ಪಿಕೊಂಡಿರುವ 3 ದೊಡ್ಡ ತೆಲುಗು ಸಿನಿಮಾಗಳಿಂದ ಅವರ ಹೆಸರನ್ನು ಕೈಬಿಡಲಾಗಿದೆಯಂತೆ. ಪವಿತ್ರಾ ಲೋಕೇಶ್ ಅವರನ್ನು ತಾಯಿಯ ಪಾತ್ರಕ್ಕಾಗಿ ಆರಿಸಿಕೊಳ್ಳಲಾಗಿತ್ತು. ‘ತಾಯಿ ಪಾತ್ರ ಅಂದ್ರೆ ಎಂಥಾದ್ದು. ಅದು ತ್ಯಾಗದ, ಪರಿಶುದ್ಧತೆಯ ಸಂಕೇತ. ಅದು ಪರಿಪೂರ್ಣವಾಗಿರಬೇಕು ‘ ಎನ್ನುವ ಕಾರಣಕ್ಕೆ ಪವಿತ್ರಾ ಲೋಕೇಶ್ ಅವರ ವಿವಾದದ ಬೆನ್ನಲ್ಲೇ ಅವರನ್ನು ಸಿನಿಮಾದಿಂದ ಕೈ ಬಿಡಲಾಗಿದೆ ಎನ್ನುವ ಸುದ್ದಿ ಇದೆ. ಆದರೆ ಆ ಸಿನಿಮಾಗಳು ಯಾವುವು, ಯಾವ ಸ್ಟಾರ್ ನಟನಿಗೆ ಪವಿತ್ರಾ ಲೋಕೇಶ್ ತಾಯಿಯ ಪಾತ್ರ ಮಾಡಬೇಕಿತ್ತು ಎನ್ನುವ ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ನರೇಶ್ ಜೊತೆಗಿನ ಮದುವೆ ವಿವಾದದ ಬಳಿಕ ಪವಿತ್ರಾ ಲೋಕೇಶ್ ಅವರಿಗೆ ಸಿನಿಮಾಗಳ ಆಫರ್ ಬರುತ್ತಿಲ್ಲ, ಈಗಾಗಲೇ ಪವಿತ್ರಾ ಲೋಕೋಶ್ ಸಹಿ ಮಾಡಿದ್ದ ಸಿನಿಮಾಗಳಿಂದಲೂ ಸಹ ಅವರನ್ನು ದೂರ ಇಟ್ಟು ಬೇರೆ ನಟಿಯರನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

ನರೇಶ್ ಪತ್ನಿ ರಮ್ಯಾ ರಘುಪತಿ, ಪವಿತ್ರಾ ಲೋಕೇಶ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಕಿತ್ತಾಟ ಚಪ್ಪಲಿಯಲ್ಲಿ ಹೊಡೆದಾಡುವ ಮಟ್ಟಕ್ಕೆ ಹೋಗಿತ್ತು. ನರೇಶ್, ಪವಿತ್ರಾ ಲೋಕೇಶ್ ಜೊತೆ ಮೈಸೂರಿನ ಹೋಟೆಲ್‌ನಲ್ಲಿ ತಂಗಿದ್ದ ಮಾಹಿತಿ ತಿಳಿದು, ರಮ್ಯಾ ಅಲ್ಲಿಗೆ ಹೋಗಿ ಕಾದು ಕೂತಿದ್ದರು. ಬೆಳ್ಳಂಬೆಳಗ್ಗೆ ಇಬ್ಬರು ತಂಗಿದ್ದ ಹೋಟೇಲ್ ರೂಂ ಬಾಗಿಲು ಬಡಿದು ರಂಪಾಟ ಮಾಡಿದ್ದರು. ಈ ವಿಚಾರದಲ್ಲಿ ನನಗೆ ನ್ಯಾಯ ಬೇಕು ಎಂದು ಹೇಳಿದ್ದರು.

error: Content is protected !!
Scroll to Top
%d bloggers like this: