ಆ ರಾತ್ರಿ ಯುವತಿಯೊಂದಿಗೆ ಲಾಡ್ಜ್ ನಲ್ಲಿ ಲೈಂಗಿಕ ಕ್ರಿಯೆ!! ಅರ್ಧ ಗಂಟೆಯ ಬಳಿಕ ಹೃದಯಾಘಾತಗೊಂಡು ಯುವಕ ಸಾವು

ಅವರಿಬ್ಬರು ಇನ್ನೇನು ಮದುವೆಯಾಗಿ ಹೊಸ ಬಾಳ್ವೆ ನಡೆಸಲು ತುದಿಗಾಲಿನಲ್ಲಿ ನಿಂತಿದ್ದ ನವ ಜೋಡಿ.ಹೇಗೂ ಮದುವೆಯಾಗುತ್ತಿದ್ದೇವಲ್ಲಾ ಎಂದು ಪಾರ್ಕ್, ಬೀಚ್ ಎಂದೆಲ್ಲಾ ಸುತ್ತಾಡಿ ಸುಸ್ತಾದ ಜೋಡಿ ಲಾಡ್ಜ್ ಒಂದಕ್ಕೆ ತೆರಳಿದ್ದು, ಆ ಬಳಿಕ ನಡೆದ ಅದೊಂದು ಘಟನೆ ಇಬ್ಬರ ಕುಟುಂಬವನ್ನೂ ಕಣ್ಣೀರಿನಲ್ಲಿ ಮುಳುಗಿಸಿದೆ.ಅತ್ತ ಯುವತಿಯ ಕೈ ಹಿಡಿದು ಸಂಸಾರ ಸಾಗಿಸಬೇಕಿದ್ದ ಯುವಕ ದುರಂತ ಮರಣಹೊಂದಿದ್ದ.

ಹೌದು, ಕಳೆದ ಸೋಮವಾರ ಮುಂಜಾನೆ ನಾಗಪುರದ ಲಾಡ್ಜ್ ಒಂದರಲ್ಲಿ ಯುವತಿಯೊಂದಿಗಿದ್ದ ಯುವಕ ಹೃದಯಾಘಾತಗೊಂಡು ಮೃತಪಟ್ಟ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಹೀಗೆ ಮೃತಪಟ್ಟ ಯುವಕನನ್ನು ವೆಲ್ಡಿಂಗ್ ಕೆಲಸ ಮಾಡುವ ಅಜಯ್ ಪಾರ್ಟಿಕಿ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಮೃತ ಯುವಕ ಅಜಯ್ ಹಾಗೂ ಆತನ ಪ್ರಿಯತಮೆ ವೃತ್ತಿಯಲ್ಲಿ ನರ್ಸ್ ಆಗಿರುವ 23 ವರ್ಷದ ಯುವತಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಭೇಟಿಯ ಬಳಿಕ ಸುತ್ತಾಡಿದ ಜೋಡಿಯು ರಾತ್ರಿಯಾಗುತ್ತಲೇ ತಂಗಲು ಲಾಡ್ಜ್ ಒಂದಕ್ಕೆ ತೆರಳಿದ್ದು, ರೂಮ್ ಬುಕ್ ಮಾಡಿ ತಂಗಿದ್ದಾರೆ ಎನ್ನಲಾಗಿದೆ. ಆ ರಾತ್ರಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ಸುಮಾರು ಅರ್ಧ ಗಂಟೆಯ ಬಳಿಕ ಅಜಯ್ ಬೆಡ್ ಮೇಲೆಯೇ ಕುಸಿದು ಬಿದ್ದಿದ್ದ.

ಇದರಿಂದ ಗಾಬರಿಗೊಂಡ ಯುವತಿ ಲಾಡ್ಜ್ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನ ಪ್ರಾಣಪಕ್ಷಿ ಅದಾಗಲೇ ಹಾರಿ ಹೋಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೋಡಿ ತಂಗಿದ್ದ ಲಾಡ್ಜ್ ಕೋಣೆಯನ್ನು ಪರಿಶೀಲನೆ ನಡೆಸಿದ್ದು, ಯುವಕ ಲೈಂಗಿಕ ಕ್ರಿಯೆಗೂ ಮುನ್ನ ಯಾವುದಾದರೂ ಮಾದಕ ದೃವ್ಯ ಅಥವಾ ಔಷಧಿ ಸೇವಿಸಿದ್ದಾನೆಯೇ ಎನ್ನುವ ಬಗ್ಗೆಯೂ ತನಿಖೆ ನಡೆದಿದೆ.

ಸದ್ಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯಾವುದೇ ವಿವರಗಳು ಪಟ್ಟೆಯಾಗಿಲ್ಲ. ಹೆಚ್ಚಿನ ತನಿಖೆಗಾಗಿ ಮೃತ ವ್ಯಕ್ತಿಯ ರಕ್ತ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವರದಿಯ ಬಳಿಕ ಸಾವಿನ ಹಿನ್ನೆಲೆ ಬಯಲಾಗಲಿದೆ.

Leave A Reply

Your email address will not be published.