ಮಂಗಳೂರು : ಕಡಲತೀರದಲ್ಲಿ ಚಿನ್ನಕ್ಕಾಗಿ ಹುಡುಕಾಟ | ಚಿನ್ನ ದೊರಕಿತೇ?

ಮಲ್ಪೆ: ತೀರದ ಜನರಿಗೆ ಖುಷಿಯ ಸಂಭ್ರಮ ಎಂದೇ ಹೇಳಬಹುದು. ಏಕೆಂದರೆ ಮಲ್ಪೆ ತೀರದಲ್ಲಿ ಚಿನ್ನಾಭರಣಗಳು ದೊರಕುತ್ತಿದೆ ಎಂಬ ಸುದ್ದಿಯೊಂದು ಭರದಿಂದ ಗಾಳಿಯಲ್ಲಿ ತೇಲಿ ಬರುತ್ತಿದೆ. ಹೌದು, ಹಾಗಾಗಿ ಜನರೆಲ್ಲ ಮಲ್ಪೆ ಕಡಲ ತೀರದಲ್ಲಿ ಚಿನ್ನ ಹುಡುಕಾಡುವ ತವಕದಲ್ಲಿ ಇದ್ದಾರೆ.

ಇಲ್ಲಿನ ಕಡಲ ತೀರದಲ್ಲಿ ಚಿನ್ನಾಭರಣಗಳು ಸಿಗುತ್ತವೆ ಎಂದು ಜನರು ದಿನವಿಡೀ ಹುಡುಕಾಟ ನಡೆಸುತ್ತಿರುವುದು ಕಂಡುಬರುತ್ತಿದೆ. ಬೇಸಗೆಯ ಸಂದರ್ಭದಲ್ಲಿ ಬೀಚ್ ನಲ್ಲಿ ಆಟವಾಡಲು ಬಂದ ಪ್ರವಾಸಿಗರು ನೀರಾಟದ ವೇಳೆ ಚಿನ್ನಾಭರಣ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳೆದು ಕೊಳ್ಳುತ್ತಾರೆ. ನೀರಿನ ಸೆಳೆತಕ್ಕೆ ಸಾಮಾನ್ಯವಾಗಿ ಇಂತಹ ಘಟನೆ ನಡೆಯುತ್ತದೆ. ಅನಂತರ ಅದು ದಡ ಸೇರುವುದು ಮಾಮೂಲಿ. ಹಾಗೇ ಬಂದ ಆಭರಣ ಮರಳಿನಡಿ ಹೂತರೆ ಮತ್ತೆ ಸಿಗುವುದು ಕಷ್ಟಸಾಧ್ಯ.

ಮಳೆಗಾಲದಲ್ಲಿ ಬಿರುಸಿನಿಂದ ಗಾಳಿ ಮಳೆ ಬಂದಾಗ ಏಳುವ ಬೃಹತ್ ಅಲೆಗಳು ಮರಳ ದಂಡೆಗೆ ಆಪ್ಪಳಿಸುವುದರಿಂದ ಮರಳಿ ನಡಿಯ ಇರಬಹುದಾದ ಚಿನ್ನಾ ಭರಣಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಹುಡುಕಾಟ ನಿರತರು. ಹಾಗಾದರೆ ನಿಮಗೇನಾದರೂ ಚಿನ್ನಾಭರಣ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಯಾರಿಂದಲೂ ಸಕಾರಾತ್ಮಕ ಉತ್ತರ ಬರುವುದಿಲ್ಲ.

ಆದರೂ ಹುಡುಕಾಡುವ ಮಂದಿ ಹುಡುಕಾಡುತ್ತಾರೆ. ಮನುಷ್ಯ ಆಸೆ ಪಡುವುದು ಸಹಜ. ಇದೂ ಒಂದು ರೀತಿಯ ಕೆಲಸವೆಂದೇ ನಾವು ತಿಳಿದುಕೊಳ್ಳೋಣ. ಕಡಲತಾಯಿ ಯಾವುದೇ ವಸ್ತುವನ್ನು ತನ್ನ ಒಡಲಲ್ಲಿ ಇಡುವುದಿಲ್ಲ ಎಂಬ ಮಾತಿದೆ. ಹಾಗೆನೇ ತನ್ನ ಜೋಳಿಗೆಗೆ ಬಂದ ವಸ್ತುವನ್ನು ಕಡಲತಾಯಿ ವಾಪಾಸ್ ದಡಕ್ಕೆ ಹಾಕುವುದು ಮಾಮೂಲಿ.

Leave A Reply

Your email address will not be published.