ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಮುಾಲು ಮನೆಯ ಉದ್ಯಮಿ ಶ್ರೀಧರ ಪೂಜಾರಿಯವರ ಪುತ್ರಿ ವಿದ್ಯಾಲಕ್ಷ್ಮಿ (28 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಎಳೆಯ ವಯಸ್ಸಿನಲ್ಲಿಯೇ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಭರತನಾಟ್ಯ, ಛದ್ಮ ವೇಷ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿ ಪಡೆದಿದ್ದರು. ಯುಎಸ್ಎ ಯಲ್ಲಿ ಉದ್ಯೋಗದಲ್ಲಿದ್ದು ಅನಾರೋಗ್ಯದ ಕಾರಣದಿಂದ ಊರಿಗೆ ಮರಳಿದ್ದರು.
ಮೃತರು ತಂದೆ ಶ್ರೀಧರ ಪೂಜಾರಿ, ತಾಯಿ ಜನಿತಾ, ಸಹೋದರ ಶಿವ ಪ್ರಸಾದ್ ಹಾಗೂ ಅಪಾರ ಕುಟುಂಬ ವರ್ಗದವರನ್ನು ಆಗಲಿದ್ದಾರೆ.
You must log in to post a comment.