‘ಕಳೆದುಕೊಂಡದ್ದು ಕೂದಲು, ಉದುರಿದ್ದು ಜೀವ’ ; ಕೂದಲು ಉದುರುತ್ತಿದ್ದಕ್ಕೆ ಬೇಸತ್ತ ಯುವತಿ ಆತ್ಮಹತ್ಯೆ !

ಮೈಸೂರು : ಕೂದಲು ಉದುರುತ್ತಿದ್ದಕ್ಕೆ ಬೇಸತ್ತು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೈಸೂರಿನ ರಾಘವೇಂದ್ರ ನಗರದಲ್ಲಿ ಈ ಘಟನೆ ನಡೆದಿದ್ದು, ಬೆಳಕಿಗೆ ಬಂದಿದೆ. ಯುವತಿ ಕಾವ್ಯಶ್ರೀ (22) ಪತ್ಮಂಡೆ ಸಮಸ್ಯೆಯಿಂದ ಬಳಲುತ್ತಿದ್ದಳು. ಹಲವು ಕಡೆ ಚಿಕಿತ್ಸೆ ಪಡೆದರೂ ಪರಿಹಾರ ದೊರತಿರಲಿಲ್ಲ. ದಿನ ಕಳೆದಂತೆ ಕೂದಲು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದ್ದಳು.

ಈ ಹಿನ್ನೆಲೆ ಬೇಸತ್ತು ನೇಣು ಬಿಗಿದುಕೊಂಡು ಆತ್ಹಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮೈಸೂರಿನ ನಜರಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಹೆಚ್ಚಾಗಿ ಕೆಲವರಲ್ಲಿ ಕೂದಲು ಸಮಸ್ಯೆ ನೀವು ಕಂಡಿರಬಹುದು. ಆದರೆ ಪತ್ಮಂಡೆ ಸಮಸ್ಯೆ ಸ್ವಲ್ಪ ಭಿನ್ನವಾಗಿದ್ದು ಇದು ಸಣ್ಣ ಚದರ ಗಾತ್ರ ಪ್ಯಾಚ್ ಗಳಲ್ಲಿ ಕೂದಲು ಉದುರಿ ಹೋಗುತ್ತದೆ. ಇದಕ್ಕೆ ಕ್ರಿಮಿಗಳು ಕಾರಣ ಎನ್ನಲಾಗುತ್ತದೆ. ಇದರಿಂದ ನೆತ್ತಿಯ ಕೂದಲು ಸಂಪೂರ್ಣವಾಗಿ ನಷ್ಟವಾಗಬಹುದು. ಇದು ವಯಸ್ಸು, ಲಿಂಗವನ್ನು ಲೆಕ್ಕಿಸದೆ ಯಾರ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಕೆಲವರು ಮನೆಮದ್ದನ್ನು ಹಚ್ಚಿ ಪರಿಹಾರ ಕಂಡುಕೊಂಡದ್ದಿದೆ.

error: Content is protected !!
Scroll to Top
%d bloggers like this: