ಟೈಲರ್ ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣ, ಇನ್ನೂ ಇಬ್ಬರು ಆರೋಪಿಗಳ ಬಂಧನ
ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯಲಾಲ್ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರಿಂದ, ದುಷ್ಕರ್ಮಿಗಳು ಬಟ್ಟೆ ಹೊಲಿಸುವ ನೆಪದಲ್ಲಿ ಕನ್ಹಯ್ಯಲಾಲ್ ಅಂಗಡಿಗೆ ತೆರಳಿ ಅವರ ಶಿರಚ್ಛೇದ ಮಾಡಿದ್ದರು.
ಇದೀಗ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಗಳು ಇಡೀ ಅಪರಾಧದ ಹಿಂದಿನ ಸಂಚು ರೂಪಿಸುವಲ್ಲಿ ಹಾಗೂ ಸಿದ್ಧತೆಯಲ್ಲಿ ಭಾಗಿಯಾಗಿದ್ದರು ಎಂದು ಉದಯಪುರ ಐಜಿ ಪ್ರಫುಲ್ಲ ಕುಮಾರ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಹಿಂದೆ ಬಂಧಿಸಿದ್ದ ಇಬ್ಬರು ಆರೋಪಿಗಳನ್ನು ಅಜ್ಮೀರ್ ನಲ್ಲಿರುವ ಜೈಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಕೊಲೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಶಿರಚ್ಛೇದದ ಹೊಣೆಯನ್ನು ಹೊತ್ತಿದ್ದ ರಿಯಾಜ್ ಅಖ್ತರಿ ಹಾಗೂ ಘೌಸ್ ಮೊಹಮ್ಮದ್ ಪ್ರಧಾನಿ ಮೋದಿ ಹಾಗೂ ನೂಪುರ್ ಶರ್ಮಾರಿಗೂ ಬೆದರಿಕೆಯನ್ನು ನೀಡಿದ್ದರು. ಘಟನೆ ನಡೆದ ಮಾರನೇ ದಿನವೇ ರಾಜಸ್ಥಾನ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.