ಉದಯಪುರ ಫೈಲ್ಸ್ | ಅವನೊಬ್ಬನಿದ್ದ ಪಕ್ಕದ ಮನೆಯ ಧೋಕಾ ಧೋಕಾ ಧೋಕಾ…. ನಜೀಂ !
ಉದಯಪುರ ಫೈಲ್ಸ್ | ಅವನೊಬ್ಬನಿದ್ದ ಪಕ್ಕದ ಮನೆಯ ಧೋಕಾ ಧೋಕಾ ಧೋಕಾ…. ನಜೀಂ !
ಗೆಳೆಯನಾಗಿರಬೇಕಾಗಿದ್ದವ ಟೈಲರ್ ಹತ್ಯೆಗೆ ಮೂಲ ಕಾರಣ ಹೇಗಾದ ಗೊತ್ತಾ ? ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ನವದೆಹಲಿ: ಉದಯ್ ಪುರ ಟೈಲರ್ ಹತ್ಯೆ ಪ್ರಕರಣದ ಹಂತಕರಿಗೆ ಪಾಕಿಸ್ತಾನದ ಸಂಘಟನೆಯೊಂದರ ನಂಟು ಇತ್ತು ಎಂದು ರಾಜಸ್ಥಾನದ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಕನ್ಹಯ್ಯ ಲಾಲ್ ಹಂತಕರಲ್ಲಿ ಒಬ್ಬಾತ 2014 ರಲ್ಲಿ ಪಾಕಿಸ್ತಾನದ ಕರಾಚಿಗೆ ಹೋಗಿಬಂದಿದ್ದ. ಈ ಹಂತಕರಿಗೆ ಪಾಕಿಸ್ತಾನ ಮೂಲದ ದವಾತ್-ಎ-ಇಸ್ಲಾಮಿ ಸಂಘಟನೆಯ ನಂಟಿತ್ತು ಎಂಬುದು ಪೊಲೀಸ್ ಮುಖ್ಯಸ್ಥರ ಹೇಳಿಕೆಯಿಂದ ಇದೀಗ ಬಹಿರಂಗಗೊಂಡಿದೆ.
ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಇನ್ನೂ ಮೂವರನ್ನು ಈವರೆಗೆ ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 5 ಆಗಿದೆ ಎಂದು ಡಿಜಿಪಿ ಎಂಎಲ್ ಲಾಥರ್ ಜೈಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಉದಯಪುರ ಫೈಲ್ಸ್ !
ಪ್ರವಾದಿ ಮೊಹಮ್ಮದ್ ಬಗ್ಗೆ ಟಿವಿ ಚರ್ಚೆಯೊಂದರಲ್ಲಿ ಮಾತನಾಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದರು ರಾಜಸ್ಥಾನದ ಕನ್ಹಯ್ಯ ಲಾಲ್ ಎಂಬ 45 ವರ್ಷ ವಯಸ್ಸಿನ ಟೈಲರ್ ಒಬ್ಬರು. ಹಾಗಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಸಲಿಗೆ ಈ ಅಮಾಯಕನಿಗೆ ಸ್ಮಾರ್ಟ್ ಫೋನ್ ಆಪರೇಟ್ ಮಾಡುವುದು ಹೇಗೆ ಎಂದು ತಿಳಿದಿರಲಿಲ್ಲ. ತಮಗೆ ಏನಾದರೂ ಅಗತ್ಯಬಿದ್ದರೆ ತಮ್ಮ ಮಗನಿಗೆ ಹೇಳಿ ಬೇರೆಯವರಿಗೆ ಸಂದೇಶ ರವಾನಿಸುತ್ತಿದ್ದರು.
ಆದರೆ ಅದೊಂದು ದಿನ ಮಗ ಮೊಬೈಲ್ ನಲ್ಲಿ ಗೇಮ್ ಆಟವಾಡುತ್ತಿದ್ದಾಗ ಅಚಾನಕ್ಕಾಗಿ ಮೊಬೈಲ್ ನಿಂದ ಸಂದೇಶವೊಂದು ಫಾರ್ವರ್ಡ್ ಆಗಿತ್ತು. ಅದು ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸಿದ ಶರ್ಮ ಅವರನ್ನು ಬೆಂಬಲಿಸಿ ಬರೆದ ಪೋಸ್ಟ್ ಆಗಿತ್ತು. ಅಂತಹ ಪೋಸ್ಟ್ ರಚಿಸುವ ಬುದ್ಧಿಮತ್ತೆ ಮತ್ತು ಅಗತ್ಯ ಇಲ್ಲದ ಓರ್ವ ಹಳೆಯ ಕಾಲದ ಟೈಲರಿಂಗ್ ವೃತ್ತಿ ನಡೆಸುತ್ತಿರುವ ವ್ಯಕ್ತಿಯಾಗಿದ್ದರು ಕನ್ನಯ್ಯ ಲಾಲ್.
ಯಾವಾಗ ಈತನ ಮೊಬೈಲಿನಿಂದ ನೂಪುರ್ ಬೆಂಬಲಿಸಿದಂತಹ ಸಂದೇಶ ರವಾನೆ ಆಯಿತು, ನಂತರ ಅದು ಉದಯಪುರದಂತಹ ಊರಿನಲ್ಲಿ ತಕ್ಷಣಕ್ಕೆ ಮುಸಲ್ಮಾನ ಯುವಕರ ಗಮನಕ್ಕೆ ಬಂದಿತ್ತು. ಅವರು ಆ ಸಂದೇಶ ಕಳುಹಿಸಿದ ವ್ಯಕ್ತಿಯ ಬಗ್ಗೆ ವಿಚಾರಣೆ ಶುರು ಮಾಡಿದ್ದರು. ಅವನೊಬ್ಬನಿದ್ದ ನೋಡಿ ನೋಡಿ ಧೋಕಾ ನಜೀಂ ! ಕನ್ನಯ್ಯ ಲಾಲ್ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ನಜೀಂಗೆ ಈ ವಿಚಾರ ಗೊತ್ತಾಗುತ್ತದೆ. ತನ್ನ ನೆರೆಮನೆಯ ವ್ಯಕ್ತಿಯ ಮೊಬೈಲ್ ನಿಂದ ಈ ಸಂದೇಶ ಹೋಗಿದೆ ಎಂದು ತಿಳಿದಾಗ ತಕ್ಷಣ ಹೋಗಿ ನೆರೆಮನೆಯನ್ನು ಮಾತನಾಡಿಸಿ ಸತ್ಯ ತಿಳಿದುಕೊಂಡು, ನಜೀಂ ನೆರೆಮನೆಯಾತನನ್ನು ರಕ್ಷಿಸಬೇಕಿತ್ತು. ಆದರೆ, ಕನ್ನಯ್ಯ ಲಾಲ್ ನೆರೆಮನೆಯಲ್ಲಿ ಒಬ್ಬ ಧರ್ಮ ಭ್ರಾಂತ ವಾಸಿಸುತ್ತಿದ್ದನಲ್ಲ. ಅದೇ ಕಾರಣಕ್ಕೆ ನಜೀಂ ಸೀದಾ ಹೋಗಿ ಉಳಿದ ಆತನ ಗೆಳೆಯರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಕನ್ನಯ್ಯ ಲಾಲ್ ವಿರುದ್ಧ ದೂರು ದಾಖಲಿಸುತ್ತಾನೆ.
ತಕ್ಷಣ ಕಾರ್ಯ ಪ್ರವರ್ತರಾದ ಪೊಲೀಸರು ಕನ್ನಯ್ಯ ಲಾಲ್ ನನ್ನು ಬಂಧಿಸುತ್ತಾರೆ. ನಂತರ ಐದು ದಿನಗಳ ಬಳಿಕ ನ್ಯಾಯಾಲಯ ಆತನಿಗೆ ಹೊರಕ್ಕೆ ಬಿಡುತ್ತದೆ. ಈ ಮಧ್ಯೆ ನೆರೆಮನೆಯ ನಜೀಮ್ ಕನ್ನಯ್ಯ ಲಾಲ್ ಫೋಟೋ ಮತ್ತು ಅಂಗಡಿಯ ವಿಳಾಸದ ಜೊತೆಗೆ ಫೋನ್ ನಂಬರ್ ಅನ್ನು ಕೂಡ ವೈರಲ್ ಮಾಡಿದ್ದ.
ಹೀಗೆ ಬೇಲ್ ಮೇಲೆ ಹೊರಕ್ಕೆ ಬಂದ ಕನ್ನಯ್ಯ ಲಾಲ್ ಗೆ ನಿರಂತರ ಬೆದರಿಕೆ ಕರೆಗಳು ಬರುತ್ತಲೇ ಇರುತ್ತವೆ. ಸ್ವಲ್ಪದಿನ, ಹೆಚ್ಚು ಕಮ್ಮಿ ಒಂದು ವಾರದ ಮಟ್ಟಿಗೆ ಆತ ಅಂಗಡಿ ತೆರೆಯಲು ಹೆದರಿ ಮನೆಯಲ್ಲಿ ಉಳಿಯುತ್ತಾನೆ. ಆದರೆ ಹಳೆಯ ಕಾಲದ ಬಡ ಟೈಲರ್ ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದು ಇನ್ನಷ್ಟು ಸಮಯ ಅಂಗಡಿಯ ತೆರೆಯದೆ ಇರಲು ಅಸಾಧ್ಯವಾಗಿತ್ತು. ಅಲ್ಲದೆ ಈಗಾಗಲೇ ಹೊಲಿಯಲು ಕೊಟ್ಟಿದ್ದ ಕಸ್ಟಮರ್ಗಳು ಕರೆ ಮಾಡಿ ಬೆನ್ನು ಬಿದ್ದಿದ್ದರು. ಹಾಗಾಗಿ ವಾರಗಳ ನಂತರ ಟೈಲರ್ ಅಂಗಡಿ ಓಪನ್ ಆಗುತ್ತದೆ. ಕನ್ನಯ್ಯ ಲಾಲ್ ತನ್ನ ಟೈಲರಿಂಗ್ ವೃತ್ತಿ ನಡೆಸುತ್ತಿರುತ್ತಾನೆ. ಆಗ ಕನ್ನಯ್ಯ ಲಾಲ್ ಗೆ ಇನ್ನೂ ನಿರಂತರ ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಮತ್ತು ಆತನ ಅಂಗಡಿಯ ಮುಂದೆ ನಾಲ್ಕೈದು ಜನರು ಅನುಮಾನವಾಗಿ ತಿರುಗಾಡುತ್ತಿರುವ ಕಾರಣದಿಂದ ಕಣ್ಣಯ್ಯ ಲಾಲ್ ಪೊಲೀಸರಿಗೆ ದೂರು ನೀಡುತ್ತಾನೆ. ಆಗ ಕನ್ನಯ ಲಾಲ್ ಮತ್ತು ಆತನ ನೆರೆಮನೆಯ ನಜೀಮ್ ಸೇರಿದಂತೆ ಇನ್ನಿತರ ವ್ಯಕ್ತಿಗಳನ್ನು ಕರೆದು ರಾಜಿ ಪಂಚಾಯಿತಿಗೆ ಮಾಡಿ ವಾಪಸ್ಸು ಕಳಿಸುತ್ತಾರೆ. ಆದರೂ ಈ ತರಹ ಅಂಗಡಿ ಮುಂದೆ ಅಪರಿಚಿತ ವ್ಯಕ್ತಿಗಳು ಓಡಾಡುವುದು ಗುರಾಯಿಸಿ ನೋಡುವುದು ನಡೆದೇ ಇತ್ತು.
ಮೊನ್ನೆ ರಿಯಾಜ್ ಅಖ್ತಾರಿ ಹಾಗೂ ಗೌಸ್ ಮೊಹಮ್ಮದ್ ಎಂಬ ಇಬ್ಬರು ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಜತೆಗೆ ಹತ್ಯೆಯ ವಿಡಿಯೋವನ್ನೂ ಹಂಚಿಕೊಂಡಿದ್ದ ಹಂತಕರು ಇಸ್ಲಾಮ್ ಗೆ ಅವಮಾನ ಮಾಡಿದ್ದಕ್ಕಾಗಿ ಈ ರೀತಿ ಸೇಡು ತೀರಿಸಿಕೊಂಡಿದ್ದೇವೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು.
ಘಟನೆ ನಡೆದ ತಕ್ಷಣ ದೇಶಕ್ಕೆ ದೇಶವೇ ಒಕ್ಕೊರಳಿನಲ್ಲಿ ಘಟನೆಯನ್ನು ಖಂಡಿಸಿದ್ದು ಹಿಂದೂ ಪರ ಸಂಘಟನೆಗಳು ಬೀದಿಯಲ್ಲಿ ಬಂದು ಪ್ರತಿಭಟನೆ ಶುರು ಮಾಡಿದ್ದರು. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪರಾಧ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸಿದ್ದರು.
ಇದೀಗ ಬಂದ ಮಾಹಿತಿಯ ಪ್ರಕಾರ ಈ ವಿಡಿಯೋವನ್ನು ಕರಾಚಿಯ ಗೆಳೆಯರಿಗೆ ಕಳುಹಿಸಿ ತಾವು ಏನೋ ಸಾಧನೆ ಮಾಡಿದುದನ್ನು ಎಲ್ಲರಿಗೂ ತಿಳಿಸಬೇಕೆಂದಿದ್ದೇವೆ ಎಂದು ಸಂದೇಶ ರವಾನಿಸಿದ್ದರಂತೆ.
ದಿ ಬ್ರೇವ್ ಈಶ್ವರ್ ಸಿಂಗ್ !
ಈ ಮಧ್ಯೆ, ಅವತ್ತು ಕನ್ನಯ ಲಾಲ್ ನ ಶಿರಚ್ಛೇದ ನಡೆಸುವಾಗ ಗಾಬರಿಯಿಂದ ಸುತ್ತಮುತ್ತ ಇದ್ದ ಜನರೆಲ್ಲರೂ ಹೆದರಿ ಹಿಂದೆ ಸರಿದಿದ್ದರು. ಆಗ ಗುಂಪಿನಿಂದ ಒಬ್ಬ ಧೈರ್ಯವಂತ ಎದ್ದುನಿಂತು ಕಲ್ಲಯ್ಯ ಲಾಲ್ ನನ್ನು ರಕ್ಷಿಸಲು ಮುಂದಾಗಿದ್ದ. ಆತ ಬೇರಾರು ಅಲ್ಲ ದಿ ಬ್ರೇವ್ ಈಶ್ವರ್ ಸಿಂಗ್ !
ಅತ್ಯಂತ ಹರಿತವಾದ ಆಯುಧಗಳೊಂದಿಗೆ ಆರೋಪಿಗಳು ಇದ್ದರೂ, ಈಶ್ವರ್ ಸಿಂಗ್ ಅದನ್ನು ತಡೆಯಲು ಪ್ರಯತ್ನಿಸಿದ. ಆಗ ಆತನ ಮೇಲೂ ಹತ್ಯ ಪ್ರಯತ್ನ ನಡೆದು ಹೋಗಿತ್ತು. ಆದರೆ ಅದೃಷ್ಟವಶಾತ್ ಆ ಧೈರ್ಯಶಾಲಿ ಬದುಕಿಕೊಂಡಿದ್ದ. ಇದೀಗ ದೇಹದ ಮೇಲೆ 16 ಹೊಲಿಗೆಗಳನ್ನು ಹಾಕಿಸಿಕೊಂಡು ಆತ ಚೇತರಿಸಿಕೊಳ್ಳುತ್ತಿದ್ದಾನೆ. ಇಡೀ ದೇಶ ಆತನಿಗಾಗಿ ಪ್ರಾರ್ಥಿಸುತ್ತಿದೆ.
ಇಬ್ಬರೂ ಹಂತಕರ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಓರ್ವ ಆರೋಪಿ ಗೌಸ್ ಎಂಬಾತನಿಗೆ ಕರಾಚಿ ಮೂಲದ ಇಸ್ಲಾಮಿಕ್ ಸಂಘಟನೆ ದವಾತ್-ಎ- ಇಸ್ಲಾಮಿ ಜೊತೆ ನಂಟಿದೆ. ಪ್ರಕರಣದಲ್ಲಿ ಈ ವರೆಗೂ ಒಟ್ಟು 5 ಮಂದಿಯ ಬಂಧನವಾಗಿದೆ. ಅವತ್ತು ರಾಜಿ ಪಂಚಾಯಿತಿಗೆ ಮಾಡಿದರು ಇಂತಹ ಹೀನ ಕೃತ್ಯಕ್ಕೆ ಯಾಕೆ ಕೈ ಹಾಕಿದರೂ ಎಂಬ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಯುತ್ತಿದೆ.
ಕರ್ತವ್ಯ ಲೋಪದ ಮೇಲೆ ಎ ಎಸ್ ಐ ಒಬ್ಬರನ್ನೂ ಅವಮಾನತ್ತು ಮಾಡಲಾಗಿದೆ. ಆರೋಪಿಗಳನ್ನು ಶುಕ್ರವಾಗಿ ಬಂಧಿಸಿದ ನಾಲ್ಕು ಜನರಿಗೆ ಮುಂಬಡ್ತಿ ನೀಡಲಾಗಿದೆ.
ಇದೀಗ ತನಿಖೆಯನ್ನು ಎಸ್ಐಟಿ ಬದಲು ಕೇಂದ್ರ ಸರಕಾರದ ನಿರ್ದೇಶನದಂತೆ ಎನ್ ಐ ಎ ವಹಿಸಿಕೊಂಡಿದೆ. ಈ ಕೇಸಿನ ತೀವ್ರತೆಯಿಂದಾಗಿ, ಕ್ಷೇತ್ರ ತನಿಖೆ ನಡೆದು ಕನಿಷ್ಠ ಇಬ್ಬರಿಗೆ ಗಲ್ಲು ಶಿಕ್ಷೆ ಆಗುವುದು ಖಚಿತವಾಗಿದೆ. ಅದಕ್ಕಾಗಿ ಇಡೀ ದೇಶ ಎದುರು ನೋಡುತ್ತಿದೆ. ಆದರೆ ಪಕ್ಕದ ಮನೆಯವನ ದ್ರೋಹಕ್ಕೆ ಕನ್ನಯ್ಯ ಲಾಲ್ ಕುಟುಂಬ ರೋಧಿಸುತ್ತಿದೆ. ಆ ಶೋಕ ನಿರಂತರ.