ಈ ವಾಟ್ಸ್‌ಆಯಪ್ ನೀತಿಯನ್ನು ಉಲ್ಲಂಘಿಸಿದರೆ ಜೈಲು ಸೇರುತ್ತೀರಾ !

ವಾಟ್ಸ್‌ಆಯಪ್ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ನಿರಂತರವಾಗಿ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಪ್ರಕರಣವನ್ನು ದಾಖಲಿಸಬಹುದು. ತಪ್ಪಿಗಸ್ಥರು ಜೈಲೂ ಸೇರಬಹುದು.

ವಾಟ್ಸ್‌ಆಯಪ್ ನೀತಿಯ ಅಡಿಯಲ್ಲಿ, ಸಮಾಜಕ್ಕೆ ಹಾನಿಕಾರಕ ಅಥವಾ ಸಮಾಜವನ್ನು ವಿಭಜಿಸುವ ಯಾವುದೇ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಳ್ಳುವಂತಿಲ್ಲ.  ವದಂತಿಗಳನ್ನು ಹರಡುವುದು ಕೂಡ ಅಪರಾಧದ ವ್ಯಾಪ್ತಿಗೆ ಬರುತ್ತದೆ. 

ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರನ್ನು ಬಂಧಿಸುವ ಹಕ್ಕು ಪೊಲೀಸರಿಗೂ ಇದೆ. ಅಂಥವರನ್ನು ಜೈಲಿಗೆ ಕಳುಹಿಸುವ ಹಕ್ಕು ಪೊಲೀಸರಿಗೂ ಇದೆ.

ಅಶ್ಲೀಲ ವಿಡಿಯೋ ಕಳುಹಿಸಬೇಡಿ. ಹಾಗೆ ಮಾಡಿದರೆ ಗುಂಪಿನ ಅಡ್ಮಿನ್ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ಮಕ್ಕಳ ಪೋರ್ನ್, ಗಲಭೆಯ ಚಿತ್ರಗಳು ಮತ್ತು ಸಮಾಜವಿರೋಧಿ ವಿಷಯಗಳು ಸಂಪೂರ್ಣವಾಗಿ ಈ ವರ್ಗಕ್ಕೆ ಸೇರುತ್ತವೆ.

ಕಳೆದ ತಿಂಗಳು ಮೇ ತಿಂಗಳಲ್ಲಿ ಕಂಪನಿಯು ನಿಯಮ ಉಲ್ಲಂಘಿಸಿದ್ದ 16 ಲಕ್ಷ ಖಾತೆಗಳನ್ನು ಬ್ಲಾಕ್ ಮಾಡಿದೆ.

Leave A Reply

Your email address will not be published.