‘ಮಹಾರಾಷ್ಟ್ರದ ಎರಡು ನಗರಗಳ ಮರುನಾಮಕರಣ ‘, ನಗು ತಡೆಯಲಾಗುತ್ತಿಲ್ಲ ಎಂದು ಸಿಟಿ ರವಿ ವ್ಯಂಗ್ಯ
ಮುಂಬೈ: ಮಹಾರಾಷ್ಟ್ರದಲ್ಲಿ ಎರಡು ನಗರಗಳ ಮರುನಾಮಕರಣ ಮಾಡಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದ್ದು ಎಲ್ಲಾರಿಗೂ ತಿಳಿದ ವಿಚಾರ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ಸಿ.ಟಿ.ರವಿ, ‘ಮಹಾ ವಸೂಲಿ ಆಘಾಡಿ ಸರ್ಕಾರ ತೆಗೆದುಕೊಂಡ ನಿರ್ಧಾರವು ತೀವ್ರ ನಗು ತರಿಸಿದೆ. ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಉಸ್ಮಾನಾಬಾದ್ ನಗರಗಳ ಹೆಸರನ್ನು ಬದಲಿಸಿ ಶಿವಸೇನಾ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಔರಂಗಾಬಾದ್ ಅನ್ನು ಸಂಭಾಜಿನಗರವೆಂದೂ, ಉಸ್ಮಾನಾಬಾದ್ ಅನ್ನು ಧರಶಿವ ಎಂದು ಮರುನಾಮಕರಣ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಜಾತಿ ರಾಜಕಾರಣದಲ್ಲಿ ಉದ್ಧವ್ ಠಾಕ್ರೆ ತೊಡಗಿಸಿಕೊಂಡಿದ್ದರು. ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಹಿಂದುತ್ವದ ಪ್ರೂವ್ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಸಿ.ಟಿ.ರವಿ ಟೀಕಿಸಿದ್ದಾರೆ.
ಹಿಂದೂ ವಿರೋಧಿ ಎಂದು ಈಗಾಗಲೆ ಬಿಂಬಿತವಾಗಿರುವ, ಅಧಿಕಾರಕ್ಕಾಗಿ ಯಾರ ಕಾಲು ಬೇಕಾದರೆ ಹಿಡಿತಾರೆ ಎಂದು ಅಭಿಪ್ರಾಯ ಮೂಡುವಶ್ಟರ ಮಟ್ಟಿಗೆ ಅಪ್ಪ ಬಾಳಾಸಾಹೇಬ ಹಾಕ್ಕೊಟ್ಟ ಪಂಕ್ತಿ ಮುರಿದು ಹಿಂದುತ್ವ ವಿರೋಧಿಗಳನ್ನು ಸೇರಿಕೊಂಡಿದ್ದರು ಉದ್ದವ್. ಮೊನ್ನೆ ಇನ್ನೇನು ಅಧಿಕಾರ ಕಳೆದು ಹೋಗುತ್ತದೆ ಅನ್ನುವಾಗ ಬಿಜೆಪಿ ನಾಯಕ ಫಡ್ನವೀಸ್ ಗೆ ಕರೆ ಮಾಡಿ ಬಿಜೆಪಿ ಜತೆ ಸೇರ್ತೇನೆ ಎಂದು ಗೋಗರೆದಿದ್ದರಂತೆ ಉದ್ದವ್. ‘ಹೋಗಯ್ಶಾ, ನಿನ್ ಬಂಡಾಯ ಶಾಸಕರುಗಳಾದ ಜತೆ ಮಾತಾಡು ಬೇಕಾರೆ’ ಅಂತ ಫಡ್ನವೀಸ್ ಕರೆ ಕಟ್ ಮಾಡಿದ್ದಾರಂತೆ.