ಮೂರನೇ ಬಾರಿ ಹಸೆ ಮಣೆ ಏರಲಿದ್ದಾರೆ ನಟ ಚಿರಂಜೀವಿ ಪುತ್ರಿ?!!ಆಪ್ತಗೆಳೆಯನಿಗೆ ಮನಸೋತರೇ ಮೆಗಾ ಮಗಳು!

ತೆಲುಗು ನಟ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ಇದೀಗ ಮತ್ತೊಮ್ಮೆ ಭಾರೀ ಸುದ್ದಿಯಲ್ಲಿದ್ದಾರೆ. ಮದುವೆಯ ವಿಷಯದಲ್ಲಿ ಚಿರಂಜೀವಿ ಪುತ್ರಿ ಪ್ರತಿ ಬಾರಿ ಸುದ್ದಿಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.ಈಗಲೂ ಶ್ರೀಜಾ ಮತ್ತೆ ಮದುವೆಯ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಶ್ರೀಜಾ ಸುದ್ದಿಯಾಗಿರೋದು ಮೂರನೇ ಮದುವೆಯ ಕಾರಣಕ್ಕೆ.


Ad Widget

Ad Widget

ಶ್ರೀಜಾ ಈ ಮೊದಲು ಪ್ರೀತಿಸಿ ವಿವಾಹವಾಗಿದ್ದು ವರದಕ್ಷಿಣೆ ಕಿರುಕುಳದಿಂದಾಗಿ ಮೊದಲನೆ ಪತಿಯಿಂದ ದೂರವಾಗಿದ್ದ ಕಾರಣಕ್ಕೆ. ನಂತರ ಎರಡನೇ ಬಾರಿ ಹಿರಿಯರ ಸಮ್ಮುಖದಲ್ಲಿ ಕಲ್ಯಾಣ್ ದೇವ್ ಜೊತೆ ಹಸೆಮಣೆ ಏರಿದ್ದರು. ಈ ಜೋಡಿಗೆ ಎರಡು ಮುದ್ದಾದ ಮಕ್ಕಳು ಇದ್ದಾರೆ. ಈ ಮಧ್ಯೆ ಶ್ರೀಜಾ ಹಾಗೂ ಕಲ್ಯಾಣ್ ದೇವ್ ದೂರ ದೂರವಾಗ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಯಾವ ಸುದ್ದಿಗೂ ಚಿರಂಜೀವಿ ಕುಟುಂಬವಾಗಲಿ ಕಲ್ಯಾಣ್ ದೇವ್ ಕುಟುಂಬವಾಗಲಿ ಪ್ರತಿಕ್ರಿಯೆ ನೀಡಿರಲಿಲ್ಲಿ.


Ad Widget

ಇದೀಗ ಶ್ರೀಜಾಗೆ ತನ್ನ ಆಪ್ತ ಗೆಳೆಯನೊಂದಿಗೆ ಮತ್ತೆ
ಪ್ರೇಮಾಂಕುರವಾಗಿದೆಯಂತೆ. ಶೀಘ್ರದಲ್ಲೇ ಮೂರನೇ
ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ
ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಶ್ರೀಜಾ ಮದುವೆ
ಅಥವಾ ವಿಚ್ಛೇದನ ವಿಚಾರದಲ್ಲಿ ಮೆಗಾ ಫ್ಯಾಮಿಲಿ
ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶ್ರೀಜಾ ಮದುವೆ ಅಥವಾ ವಿಚ್ಛೇದನ ವಿಚಾರದಲ್ಲಿ ಮೆಗಾ ಫ್ಯಾಮಿಲಿ ಇದೂವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದೆಡೆ, ಶ್ರೀಜಾ ಮತ್ತು ಕಲ್ಯಾಣ್ ದೇವ್ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿರುವ ಹೊತ್ತಿನಲ್ಲಿ ಮೆಗಾಸ್ಟಾ‌ರ್ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: