ಸುಕನ್ಯಾ ಸಮೃದ್ಧಿ, PPF, NSC ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿ ಸುದ್ದಿ; ಬಡ್ಡಿ ದರ ಭಾರೀ ಹೆಚ್ಚಳ

ಕಳೆದ ತಿಂಗಳು ಆರ್.ಬಿ.ಐ. ರೆಪೋ ದರವನ್ನು 40 ಮೂಲಾಂಶಗಳಷ್ಟು ಏರಿಕೆ ಮಾಡಿದ್ದು, ಇದರೊಂದಿಗೆ ಉಳಿತಾಯದ ಮೇಲಿನ ಬಡ್ಡಿ ದರ ಏರಿಕೆಯಾಗಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ, NSC, PPF ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಗೋಪಿನಾಥ್ ಸಮಿತಿಯ ಸೂತ್ರದ ಪ್ರಕಾರ, ಸರ್ಕಾರಿ ಬಾಂಡ್ ಭದ್ರತೆಗಳ ಸರಾಸರಿ ಇಳುವರಿಗಿಂತ ಸಣ್ಣ ಉಳಿತಾಯ ದರಗಳು 25 ರಿಂದ 100 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಾಗಿ ಇರಬೇಕು.

ಇದರ ಅನ್ವಯ ಸುಕನ್ಯಾ ಸಮೃದ್ಧಿ ಮತ್ತು ಇತರ ಯೋಜನೆಗಳ ಬಡ್ಡಿದರ ಶೇಕಡ 8 ಕ್ಕಿಂತ ಹೆಚ್ಚಾಗಬೇಕಿದೆ ಅದೇ ರೀತಿ ಪಿಪಿಎಫ್ ಬಡ್ಡಿದರ ಶೇಕಡಾ 7.8 ರಷ್ಟು ಹೆಚ್ಚಾಗಬೇಕಿದೆ ಎನ್ನಲಾಗಿದೆ.

Leave A Reply

Your email address will not be published.