ಗಾಸಿಪ್ ಗೆ ಕೋಪಗೊಂಡು ಗರಂ ಆದ ಆಲಿಯಾ! ಹೇಳಿದ್ದೇನು ಕಾರಣವೇನು ?
ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಆಲಿಯಾಗೆ ವಿಪರೀತ ಕೋಪ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಪತಿ ರಣಬೀರ್ ಕಪೂರ್ ಬಗ್ಗೆ ಕೇಳಿಬಂದ ಗಾಸಿಪ್.
ತಮ್ಮ ಬಗ್ಗೆ ಹರಡಿರುವ ಗಾಸಿಪ್ನ ವರದಿಯನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಲಿಯಾ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಆಲಿಯಾ ಭಟ್ ಗರ್ಭಿಣಿ ಆಗಿರುವುದರಿಂದ ಅವರ ಸಿನಿಮಾ ಕೆಲಸಗಳು ತಡ ಆಗುತ್ತಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದೂ ಅಲ್ಲದೇ, ಸದ್ಯ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿರುವ ಆಲಿಯಾರನ್ನು ವಾಪಸ್ ಭಾರತಕ್ಕೆ ಕರೆತರಲು ರಣಬೀರ್ ಕಪೂರ್ ಹೋಗುತ್ತಿದ್ದಾರೆ ಎಂದು ಬರೆಯಲಾಗಿದೆ. ಇದನ್ನು ಕಂಡು ಆಲಿಯಾ ಭಟ್ ಗರಂ ಆಗಿದ್ದಾರೆ.
‘ನನ್ನಿಂದ ಯಾವುದೇ ಸಿನಿಮಾದ ಕೆಲಸ ವಿಳಂಬವಾಗಿಲ್ಲ. ನಾನು ಮಹಿಳೆಯೇ ಹೊರತು ಪಾರ್ಸೆಲ್ ಅಲ್ಲ. ಹಾಗಾಗಿ ನನ್ನನ್ನು ಯಾರೂ ಪಿಕ್ ಮಾಡುವ ಅನಿವಾರ್ಯತೆ ಇಲ್ಲ. ನನಗೆ ವಿಶ್ರಾಂತಿಯ ಅವಶ್ಯಕತೆ ಇಲ್ಲ. ಆದರೆ ನಿಮಗೆ ಖಂಡಿತವಾಗಿ ವೈದ್ಯರ ಸರ್ಟಿಫಿಕೇಟ್ ಬೇಕು’ ಎಂದು ಆಲಿಯಾ ಭಟ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ನಾವಿನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು 2022. ನಾವು ಹಳೇ ಕಾಲದ ಆಲೋಚನೆಯಿಂದ ಹೊರಬರಬಹುದೇ?’ ಎಂದು ಆಲಿಯಾ ಭಟ್ ಅವರು ಗುಡುಗಿದ್ದಾರೆ. ಇದರ ಜೊತೆಗೆ, ತಮಗೆ ಅಭಿನಂದನೆ ತಿಳಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.